ನೈಜೀರಿಯ ಫುಟ್ಬಾಲಿಗನ ಕ್ಷಮೆ ಕೇಳಿದ ಬಾಲಿವುಡ್ ನಟಿ
Team Udayavani, Feb 7, 2019, 12:30 AM IST
ಮುಂಬೈ: ಬಾಲಿವುಡ್ ನಟಿ ಇಶಾ ಗುಪ್ತಾ ನೈಜೀರಿಯ ಫುಟ್ಬಾಲ್ ತಾರೆ ಅಲೆಕ್ಸಾಂಡರ್ ಐವೊಬಿ ಬಳಿ ಪತ್ರದ ಮೂಲಕ ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಇಶಾ ಗುಪ್ತಾ ಆರ್ಸೆನಲ್ ಫುಟ್ಬಾಲ್ ತಂಡದ ಅಭಿಮಾನಿಯಾಗಿದ್ದು ಇತ್ತೀಚೆಗೆ ತಂಡದ ಆಟಗಾರ ಐವೊಬಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಡೆದ ಸಂಭಾಷಣೆ ವೇಳೆ ಇಶಾ ಸ್ನೇಹಿತರೊಬ್ಬರು “ಗೊರಿಲ್ಲ’ ಎಂದಿದ್ದರು.
ಇದಕ್ಕೆ ಇಶಾ ನಕ್ಕು ಪ್ರತಿಕ್ರಿಯಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಡಿಲಿಟ್ ಮಾಡಿದ್ದರು. ನನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಬೇಕು. ಕ್ಲಬ್ ಕೂಡ ನನ್ನನ್ನು ಮನ್ನಿಸುತ್ತದೆ ಎಂದು ಭಾವಿಸಿದ್ದೇನೆ ಎಂದು ಇಶಾ ಪತ್ರದಲ್ಲಿ ಬರೆದಿದ್ದಾರೆ.