ಬೋಪಣ್ಣ ಜೋಡಿ ಗೆಲುವಿನ ಮೋಡಿ
ಫ್ರೆಂಚ್ ಓಪನ್ ಪುರುಷರ ಡಬಲ್ಸ್
Team Udayavani, May 30, 2019, 6:00 AM IST
ಲಂಡನ್: ರೊಮೇನಿಯಾದ ಮಾರಿಯಸ್ ಕೊಪಿಲ್ ಜತೆಗೂಡಿ ಆಡಿದ ಭಾರತದ ರೋಹನ್ ಬೋಪಣ್ಣ ಅವರು ಫ್ರೆಂಚ್ ಓಪನ್ನ ಮೊದಲ ಸುತ್ತಿನಲ್ಲಿ ಅದ್ಭುತ ಹೋರಾಟ ನೀಡಿ ನೇರ ಸೆಟ್ಗಳಿಂದ ಗೆಲುವು ಸಾಧಿಸಿ ಸಂಭ್ರಮಿಸಿದ್ದಾರೆ.
ಶ್ರೇಯಾಂಕ ರಹಿತ ಆಟಗಾರರಾದ ಬೋಪಣ್ಣ-ಕೊಪಿಲ್ ಅವರು ಆರನೇ ಶ್ರೇಯಾಂಕದ ರವೆನ್ ಕ್ಲಾಸೆನ್ ಮತ್ತು ಮೈಕಲ್ ವೀನಸ್ ಅವರನ್ನು 6-3, 7-6 (1) ಸೆಟ್ಗಳಿಂದ ಉರುಳಿಸಿದ್ದಾರೆ. ಈ ಹೋರಾಟ ಒಂದು ತಾಸು ಮತ್ತು 18 ನಿಮಿಷಗಳವರೆಗೆ ಸಾಗಿತ್ತು. ಪಂದ್ಯದ ವೇಳೆ ಮೂರು ಬಾರಿ ಬ್ರೇಕ್ ಪಾಯಿಂಟ್ ಎದುರಿಸಿದ ಬೋಪಣ್ಣ ಜೋಡಿ ಎಚ್ಚರಿಕೆಯಿಂದ ಆಡಿ ಅಪಾಯದಿಂದ ಪಾರಾಯಿತು. ದ್ವಿತೀಯ ಸೆಟ್ನಲ್ಲಿ ಎದುರಾಳಿಯಿಂದ ತೀವ್ರ ಹೋರಾಟ ಎದುರಿಸಿದ ಬೋಪಣ್ಣ ಸ್ವಲ್ಪವೂ ಒತ್ತಡಕ್ಕೆ ಒಳಗಾಗದೇ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. ಬೋಪಣ್ಣ ಕಳೆದ ವರ್ಷ ಇಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.
ಪುರುಷರ ಡಬಲ್ಸ್ನಲ್ಲಿ ಭಾರತದ ದಿವಿಜ್ ಶರಣ್ ಮತ್ತು ಲಿಯಾಂಡರ್ ಪೇಸ್ ತಮ್ಮ ಜತೆಗಾರರೊಂದಿಗೆ ಇಲ್ಲಿ ಆಡಲಿದ್ದಾರೆ.