ಲಕ್ಷ್ಯ ಸೇನ್‌, ಸೌರಭ್‌, ಕೌಶಲ್‌ ಚಾಂಪಿಯನ್ಸ್‌

ಭಾರತಕ್ಕೆ ತ್ರಿವಳಿ ಬ್ಯಾಡ್ಮಿಂಟನ್‌ ಪ್ರಶಸ್ತಿ

Team Udayavani, Sep 16, 2019, 5:22 AM IST

koushal-chamion

ಹೊಸದಿಲ್ಲಿ: ಭಾರತದ ಬ್ಯಾಡ್ಮಿಂಟನ್‌ಗೆ ರವಿವಾರ ತ್ರಿವಳಿ ಪ್ರಶಸ್ತಿಗಳ ಸಂಭ್ರಮ-ಸಡಗರ. ಬೆಲ್ಜಿಯಮ್‌ನಲ್ಲಿ ಲಕ್ಷ್ಯ ಸೇನ್‌ ಚಾಂಪಿಯನ್‌ ಆದ ಕೆಲವೇ ಗಂಟೆಗಳಲ್ಲಿ ಸೌರಭ್‌ ವರ್ಮ ವಿಯೆಟ್ನಾಮ್‌ ಟೂರ್ನಿಯಲ್ಲಿ ಕಿರೀಟ ಏರಿಸಿಕೊಂಡರು. ಅನಂತರ ಮುಂಬಯಿಯ ಕೌಶಲ್‌ ಧರ್ಮಾಮರ್‌ “ಮ್ಯಾನ್ಮಾರ್‌ ಇಂಟರ್‌ನ್ಯಾಶನಲ್‌ ಸೀರಿಸ್‌ ಪಂದ್ಯಾವಳಿ’ಯಲ್ಲಿ ಚಾಂಪಿಯನ್‌ ಎನಿಸಿದರು.

ಲಕ್ಷ್ಯ ಸೇನ್‌ “ಬೆಲ್ಜಿಯನ್‌ ಇಂಟರ್‌ನ್ಯಾಶನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌’ ಕೂಟದ ಫೈನಲ್‌ ಹಣಾಹಣಿಯಲ್ಲಿ ದ್ವಿತೀಯ ಶ್ರೇಯಾಂಕದ ಡೆನ್ಮಾರ್ಕ್‌ ಆಟಗಾರ ವಿಕ್ಟರ್‌ ಸ್ವೆಂಡ್ಸೆನ್‌ ವಿರುದ್ಧ 21-14, 21-11 ನೇರ ಗೇಮ್‌ಗಳ ಜಯ ಸಾಧಿಸಿದರು. ಉತ್ತರಾಖಂಡ್‌ನ‌ ಅಲ್ಮೋರಾರಾದ 18ರ ಹರೆಯದ ಪ್ರತಿಭಾನ್ವಿತ ಶಟ್ಲರ್‌ ಲಕ್ಷ್ಯ ಸೇನ್‌ ಈ ವರ್ಷ ಗೆದ್ದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.

ಲಕ್ಷ್ಯ ಸೇನ್‌ ಸೆಮಿಫೈನಲ್‌ಗಿಂತ ಸುಲಭದಲ್ಲಿ ಪ್ರಶಸ್ತಿ ಸಮರವನ್ನು ಗೆದ್ದು ಮೆರೆದದ್ದು ವಿಶೇಷವಾಗಿತ್ತು. ಸೆಮಿಫೈನಲ್‌ 48 ನಿಮಿಷಗಳ ತನಕ ಸಾಗಿದರೆ, ಫೈನಲ್‌ ಕೇವಲ 34 ನಿಮಿಷಗಳಲ್ಲಿ ಮುಗಿದು ಹೋಯಿತು. ಈ ಎರಡೂ ಮುಖಾಮುಖೀಗಳಲ್ಲಿ ಅವರಿಗೆ ಡೆನ್ಮಾರ್ಕ್‌ ಆಟಗಾರರೇ ಎದುರಾಗಿದ್ದರು.
ಮೊದಲ ಗೇಮ್‌ನ ಮೊದಲ ಅವಧಿಯ ಲ್ಲಷ್ಟೇ ಸ್ವೆಂಡ್ಸೆನ್‌ ಮೇಲುಗೈ ಸಾಧಿಸಿದ್ದನ್ನು ಬಿಟ್ಟರೆ, ಸ್ಪರ್ಧೆಯ ಉಳಿದೆಲ್ಲ ಅವಧಿಯಲ್ಲೂ ಭಾರ ತೀಯನ ಆಟಗಾರನದೇ ಪಾರುಪತ್ಯವಾಗಿತ್ತು.

ಸೌರಭ್‌ ವರ್ಮ ಸಾಹಸ
“ವಿಯೆಟ್ನಾಮ್‌ ಓಪನ್‌ ಬಿಡಬ್ಲ್ಯುಎಫ್ ಟೂರ್‌ ಸೂಪರ್‌ 100′ ಕೂಟದ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಸೌರಭ್‌ ವರ್ಮ 3 ಗೇಮ್‌ಗಳ ಹೋರಾಟ ನಡೆಸಬೇಕಾಯಿತು. ಇಲ್ಲಿ ಚೀನದ ಸುನ್‌ ಫೀ ಕ್ಸಿಯಾಂಗ್‌ ವಿರುದ್ಧ 21-12, 17-21, 21-14 ಅಂತರದಿಂದ ಗೆದ್ದರು.

ಮೊದಲ ಗೇಮ್‌ನಲ್ಲಿ ಸೌರಭ್‌ ಆಟ ಅಮೋಘವಾಗಿತ್ತು. ಬ್ರೇಕ್‌ ವೇಳೆ 11-4ರಷ್ಟು ಮುನ್ನಡೆ ಹೊಂದಿದ್ದ ಅವರು 21-12 ಅಂಕಗಳ ಮೇಲುಗೈ ಸಾಧಿಸಿದರು. ಆದರೆ ದ್ವಿತೀಯ ಗೇಮ್‌ನಲ್ಲಿ ಚೀನೀ ಶಟ್ಲರ್‌ ತಿರುಗೇಟು ನೀಡಿದರು. ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಸೌರಭ್‌ ಆಟ ಚುರುಕುಗೊಂಡಿತು. ಉತ್ತಮ ಅಂತರದೊಂದಿಗೆ ಗೆದ್ದು ಪ್ರಶಸ್ತಿ ಮೇಲೆ ಹಕ್ಕು ಚಲಾಯಿಸಿದರು.

ವರ್ಷದ 3ನೇ ಪ್ರಶಸ್ತಿ
ಇದು ಸೌರಭ್‌ ವರ್ಮ 2019ರಲ್ಲಿ ಗೆದ್ದ 3ನೇ ಬ್ಯಾಡ್ಮಿಂಟನ್‌ ಪ್ರಶಸ್ತಿ. ಇದಕ್ಕೂ ಮೊದಲು ಹೈದರಾಬಾದ್‌ ಓಪನ್‌ ಮತ್ತು ಸ್ಲೊವೇನಿಯನ್‌ ಇಂಟರ್‌ನ್ಯಾಶನಲ್‌ ಕೂಟದಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ 38ನೇ ಸ್ಥಾನದಲ್ಲಿರುವ ಸೌರಭ್‌ ವರ್ಮ, ಈ ವರ್ಷದ ರಾಷ್ಟ್ರೀಯ ಚಾಂಪಿಯನ್‌ ಕೂಡ ಹೌದು. ಇವರ ಮುಂದಿನ ಟೂರ್ನಿ “ಕೊರಿಯಾ ಓಪನ್‌ ವರ್ಲ್ಡ್ ಟೂರ್‌ ಸೂಪರ್‌ 500′. ಇದು ಸೆ. 24ರಿಂದ 29ರ ತನಕ ನಡೆಯಲಿದೆ.

26ರ ಹರೆಯದ ಮಧ್ಯಪ್ರದೇಶದವ ರಾದ ಸೌರಭ್‌ ವರ್ಮ ಕಳೆದ ವರ್ಷವೂ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೂಟ ಗಳಲ್ಲಿ ಸಂಚಲನ ಮೂಡಿಸಿದ್ದರು. 2018ರಲ್ಲಿ ಡಚ್‌ ಓಪನ್‌ ಮತ್ತು ಕೊರಿಯಾ ಓಪನ್‌ ಪ್ರಶಸ್ತಿಗಳು ಸೌರಭ್‌ ಪಾಲಾಗಿದ್ದವು.

ಮ್ಯಾನ್ಮಾರ್‌ ಪ್ರಶಸ್ತಿ ಗೆದ್ದ ಕೌಶಲ್‌ ಧರ್ಮಾಮರ್‌
ಭಾರತಕ್ಕೆ ದಿನದ 3ನೇ ಬ್ಯಾಡ್ಮಿಂಟನ್‌ ಪ್ರಶಸ್ತಿ ತಂದಿತ್ತವರು ಮುಂಬಯಿಯ ಕೌಶಲ್‌ ಧರ್ಮಾಮರ್‌. 23ರ ಹರೆಯದ ಅವರು ಮ್ಯಾನ್ಮಾರ್‌ ಇಂಟರ್‌ನ್ಯಾಶನಲ್‌ ಸೀರಿಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಎನಿಸಿದರು. ಫೈನಲ್‌ನಲ್ಲಿ ಕೌಶಲ್‌ ಇಂಡೋನೇಶ್ಯದ ಕರೊನೊ ಕರೊನೊ ವಿರುದ್ಧ ಒಂದು ಗಂಟೆ ಕಾಲ ನಡೆದ ಜಿದ್ದಾಜಿದ್ದಿ ಕಾದಾಟದಲ್ಲಿ 18-21, 21-14, 21-11 ಅಂತರದ ಜಯ ಸಾಧಿಸಿದರು. ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 187ನೇ ಸ್ಥಾನದಲ್ಲಿರುವ ಕೌಶಲ್‌, “ಉದಯ ಪವಾರ್‌ ಬ್ಯಾಡ್ಮಿಂಟನ್‌ ಅಕಾಡೆಮಿ’ಯಲ್ಲಿ ಟ್ರೇನಿ ಆಗಿದ್ದಾರೆ. ಕಳೆದ ವರ್ಷ ಹ್ಯಾಟ್‌ಝರ್‌ ಇಂಟರ್‌ನ್ಯಾಶನಲ್‌ ಪ್ರಶಸ್ತಿಯನ್ನು ಜಯಿಸಿದ್ದರು.

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.