Chess ಮ್ಯಾಕ್ಸಿಮೆ, ಪ್ರಜ್ಞಾನಂದ ಜಂಟಿ ಮೂರನೇ ಸ್ಥಾನ
ಟಾಟಾ ಸ್ಟೀಲ್ ಚೆಸ್ ಇಂಡಿಯಾ 2023
Team Udayavani, Sep 7, 2023, 11:41 PM IST
ಕೋಲ್ಕತಾ: ಭಾರತದ ಚೆಸ್ ತಾರೆ ಆರ್. ಪ್ರಜ್ಞಾನಂದ ಅವರು ಟಾಟಾ ಸ್ಟೀಲ್ ಚೆಸ್ ಇಂಡಿಯಾ 2023ರಲ್ಲಿ ಜಂಟಿ ಮೂರನೇ ಸ್ಥಾನ ಪಡೆದಿದ್ದರೆ ವಿಶ್ವ ಬ್ಲಿಟ್ಜ್ ಚಾಂಪಿಯನ್ ಮ್ಯಾಕ್ಸಿಮೆ ವಾಚಿಯೆರ್ ಲಾಗ್ರೇವ್ ರ್ಯಾಪಿಡ್ ವಿಭಾಗದಲ್ಲಿ ಇನ್ನೆರಡು ಪಂದ್ಯಗಳಲ್ಲಿ ಜಯ ಸಾಧಿಸಿ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ ಫ್ರಾನ್ಸ್ನ ಮ್ಯಾಕ್ಸಿಮೆ ಅವರು ಒಟ್ಟಾರೆ ಏಳಂಕ ಪಡೆದು ಅಗ್ರಸ್ಥಾನ ಪಡೆದರು. ಪಿ. ಹರಿಕೃಷ್ಣ ಅವರನ್ನು ಸೋಲಿಸುವ ಮೂಲಕ ಇನ್ನೊಂದು ಸುತ್ತಿನ ಹೋರಾಟ ಇರುವಾಗಲೇ ಮ್ಯಾಕ್ಸಿಮೆ ಪ್ರಶಸ್ತಿ ಗೆಲ್ಲುವುದನ್ನು ಖಚಿತಪಡಿಸಿದ್ದರು. ಈ ಮೊದಲು ಅವರು ಭಾರತದ ಅರ್ಜುನ್ ಎರಿಗಸಿ ವಿರುದ್ಧ ಜಯ ಪಡೆದಿದ್ದರು. ಅಂತಿಮ ಸುತ್ತಿನಲ್ಲಿ ಅವರು ಅಜರ್ಬೈಜಾನ್ನ ರಾಡ್ಜಬೋವ್ ವಿರುದ್ಧ ಆರು ನಡೆಗಳಲ್ಲಿಯೇ ಡ್ರಾ ಸಾಧಿಸಿದ್ದರು. 2019ರ ವಿಶ್ವಕಪ್ ವಿಜೇತ ತೈಮೌರ್ ರಾಡ್ಜಬೋವ್ 5.5 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರು.
ಇತ್ತೀಚೆಗೆ ನಡೆದ ವಿಶ್ವಕಪ್ನಲ್ಲಿ ರನ್ನರ್ ಅಪ್ ಸ್ಥಾನ ಪಡೆದು ಗಮನ ಸೆಳೆದಿದ್ದ ಪ್ರಜ್ಞಾನಂದ ಅವರು ವಿದಿತ್ ಗುಜ್ರಾತಿ ಮತ್ತು ಅಲೆಕ್ಸಾಂಡರ್ ಗ್ರಿಸ್ಚುಕ್ ಅವರ ಜತೆ ತಲಾ 5 ಅಂಕಗಳೊಂದಿಗೆ ಜಂಟಿ ಮೂರನೇ ಸ್ಥಾನ ಪಡೆದರು.
ಎರಡು ಜಯ ಪಡೆದ ಪ್ರಜ್ಞಾನಂದ ಅವರು ಭಾರತದ ನಂಬರ್ ವನ್ ಡಿ. ಗುಕೇಶ್ ಅವರೊಂದಿಗಿನ ಪಂದ್ಯದಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ