ಕಾಮನ್ವೆಲ್ತ್ 2022: ವೇಟ್ಲಿಫ್ಟಿಂಗ್ನಲ್ಲಿ ವಿಕಾಸ್ ಠಾಕೂರ್ ಗೆ ಬೆಳ್ಳಿ
Team Udayavani, Aug 2, 2022, 11:04 PM IST
ಬರ್ಮಿಂಗ್ಹ್ಯಾಮ್: ಭಾರತದ ಹೆವಿವೇಟ್ ಲಿಫ್ಟರ್ ವಿಕಾಸ್ ಠಾಕೂರ್ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಇನ್ನೊಂದು ಪದಕ ದೊರಕಿಸಿಕೊಟ್ಟಿದ್ದಾರೆ.
96 ಕೆ.ಜಿ. ವಿಭಾಗದಲ್ಲಿ ಅವರು ಒಟ್ಟು 346 ಕೆ.ಜಿ. (155 +191 ಕೆ.ಜಿ.) ಭಾರ ಎತ್ತುವ ಮೂಲಕ ಬೆಳ್ಳಿಯ ಪದಕ ಗೆದ್ದರು. ಇದು ಸತತ ಮೂರನೇ ಗೇಮ್ಸ್ನಲ್ಲಿ ಅವರು ಗೆದ್ದ ಮೂರನೇ ಪದಕವಾಗಿದೆ.
2014ರ ಗ್ಲಾಸ್ಕೋ ಗೇಮ್ಸ್ನಲ್ಲಿ ಬೆಳ್ಳಿ ಜಯಿಸಿದ್ದ ಠಾಕೂರ್ ಗೋಲ್ಡ್ ಕೋಸ್ಟ್ನಲ್ಲಿ ಕಂಚು ಜಯಿಸಿದ್ದರು. ಐದು ಬಾರಿಯ ಕಾಮನ್ವೆಲ್ತ್ ಪದಕ ಚಾಂಪಿಯನ್ ಆಗಿದ್ದ ಠಾಕೂರ್ ಸ್ನ್ಯಾಚ್ನ ಮೂರು ಪ್ರಯತ್ನಗಳಲ್ಲಿ ಅನುಕ್ರಮವಾಗಿ 149, 153 ಮತ್ತು 155 ಕೆ.ಜಿ. ಭಾರ ಎತ್ತಿದ್ದರು.
ಸಮೋವದ ಡಾನ್ ಒಪೆಲಾಗ್ 381 ಕೆ.ಜಿ. (171+210) ಭಾರ ಎತ್ತಿ ಚಿನ್ನ ಜಯಿಸಿದ್ದರೆ ಫಿಜಿಯ ತನಿಯೆಲಾ ಟುಸುವ ರೈನಿಬೋಗಿ 343 ಕೆ.ಜಿ. (155+188) ಭಾರ ಎತ್ತಿ ಕಂಚು ಗೆದ್ದರು. ಸ್ಥಳೀಯ ಫೇವರಿಟ್ ಸಿರಿಲೆ ಚಾಟ್ಚೆಟ್ ಅವರು ಕ್ಲೀನ್ ಅಂಡ್ ಜರ್ಕ್ನಲ್ಲಿ ಸರಿಯಾಗಿ ಲಿಫ್ಟ್ ಮಾಡಲು ವಿಫಲರಾಗಿ ನಿರಾಶೆ ಮೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ