ಬಾಕ್ಸಿಂಗ್: ಗೌರವ್, ಮನೀಶ್ ಕ್ವಾರ್ಟರ್ ಫೈನಲ್ ಪ್ರವೇಶ
Team Udayavani, Apr 10, 2018, 6:55 AM IST
ಗೋಲ್ಡ್ಕೋಸ್ಟ್: ಸೋಮವಾರದ ಗೇಮ್ಸ್ ಕೂಟದ ಪುರುಷರ ಬಾಕ್ಸಿಂಗ್ನಲ್ಲಿ ಭಾರತದ ಗೌರವ್ ಸೋಲಂಕಿ (52 ಕೆಜಿ) ಮತ್ತು ಮನೀಶ್ ಕೌಶಿಕ್ (60 ಕೆಜಿ) ಕ್ವಾರ್ಟರ್ ಫೈನಲ್ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ಸೋಲಂಕಿ ಅವರು ಘಾನಾದ ಅಕಿಮೋಸ್ ಅನಾಂಗ್ ಅಂಪಿಯ ವಿರುದ್ಧ 5-0 ಅಂತರದ ಗೆಲುವು ಸಾಧಿಸಿದರೆ, ಕೌಶಿಕ್ ಟ್ರಿನಿಡಾಡ್ ಮತ್ತು ಟೊಬಾಗೋದ ಮೈಕಲ್ ಅಲೆಕ್ಸಾಂಡರ್ ಅವರನ್ನು 4-0 ಅಂತರದಿಂದ ಕೆಡವಿದರು.
ಎ. 11ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಸೋಲಂಕಿ ಅವರು ಪಪುವ ನ್ಯೂ ಗಿನಿಯ ಚಾರ್ಲ್ಸ್ ಕೀಮಾ ಅವರನ್ನು ಎದುರಿಸಲಿದ್ದು, ಕೌಶಿಕ್ ಅವರು ಯುಪೋಪಿಯನ್ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಇಂಗ್ಲೆಂಡ್ ಬಾಕ್ಸರ್ ಕಾಲಂ ಫ್ರೆಂಚ್ ಅವರ ಕಠಿನ ಸವಾಲು ಸ್ವೀಕರಿಸಲಿದ್ದಾರೆ.