ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್: ಭಾರತದ ಯೋಗೇಶ್ವರ್ ಸಿಂಗ್ಗೆ 15ನೇ ಸ್ಥಾನ
Team Udayavani, Jul 31, 2022, 11:26 PM IST
ಬರ್ಮಿಂಗ್ಹ್ಯಾಮ್: ಪುರುಷರ ಆಲ್ರೌಂಡ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಫೈನಲ್ನಲ್ಲಿ ಭಾರತದ ಯೋಗೇಶ್ವರ್ ಸಿಂಗ್ 15ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಅವರು ಈ ವಿಭಾಗದ ಫೈನಲ್ಗೆ ಆಯ್ಕೆಯಾಗಿದ್ದ ಭಾರತದ ಏಕೈಕ ಜಿಮ್ನಾಸ್ಟ್ ಆಗಿದ್ದರು. ಸೈಫ್ ತಂಬೋಲಿ ಮತ್ತು ಸತ್ಯಜಿತ್ ಮೊಂಡಲ್ ಅವರಿಗೆ ಸ್ವಲ್ಪದರಲ್ಲೇ ಅವಕಾಶ ತಪ್ಪಿತ್ತು.
ಹರ್ಯಾಣದವರಾದ, 3 ಬಾರಿಯ ವಿಶ್ವ ಚಾಂಪಿಯನ್ಶಿಪ್ನಲ್ಲಿ ದೇಶವನ್ನು ಪ್ರತಿನಿಧಿಸಿದ ಯೋಗೇಶ್ವರ್ ಸಿಂಗ್ ಒಟ್ಟು 74.700 ಅಂಕ ಗಳಿಸಿದರು. ಇಂಗ್ಲೆಂಡ್ ಮೂರೂ ಪದಕಗಳನ್ನು ಬಾಚಿಕೊಂಡಿತು. ಜಾಕ್ ಜರ್ಮನ್ ಚಿನ್ನ (83.450), ಜೇಮ್ಸ್ ಹಾಲ್ ಬೆಳ್ಳಿ (82.900) ಮತ್ತು ಮಾರಿಯಸ್ ಜಾರ್ಜಿಯೊ ಕಂಚು ಗೆದ್ದರು (81.750).