ಬುಟ್ಟಬೊಮ್ಮ ಹಾಡಿಗೆ ಸ್ಟೆಪ್ ಹಾಕಿದ ಡೇವಿಡ್ ವಾರ್ನರ್ ದಂಪತಿ
Team Udayavani, May 2, 2020, 12:09 PM IST
ಮೆಲ್ಬೋರ್ನ್: ಇತ್ತೀಚಿನ ದಿನಗಳ್ಲಲಿ ಟಿಕ್ ಟಾಕ್ ನಲ್ಲಿ ಸುದ್ದಿ ಮಾಡುತ್ತಿರುವ ಕ್ರಿಕೆಟ್ ಆಟಗಾರ ಯಾರೆಂದರೆ ಅದು ಆಸೀಸ್ ನ ಆರಂಭಿಕ ಆಟಗಾರ ಡೇವಿಡ್ ವಾರ್ನರ್. ಇತ್ತೀಚೆಗಷ್ಟೇ ಮಗಳಿಗಾಗಿ ಟಿಕ್ ಟಾಕ್ ಖಾತೆ ತೆರೆದಿದ್ದ ವಾರ್ನರ್ ಸದ್ಯ ಫುಲ್ ಸುದ್ದಿಯಲ್ಲಿದ್ದಾರೆ.
ತೆಲುಗಿನ ಈ ಬಾರಿಯ ಹಿಟ್ ಚಿತ್ರ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮ ಹಾಡು ಕೂಡಾ ಅಷ್ಟೇ ಹಿಟ್ ಆಗಿತ್ತು. ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನಟನೆಯ ಹಾಡಿನ ಸ್ಟೆಪ್ ಗಳನ್ನು ಬಹಳಷ್ಟು ಜನ ಟಿಕ್ ಟಾಕ್ ನಲ್ಲಿ ನಕಲು ಮಾಡಿದ್ದರು. ಸದ್ಯ ವಾರ್ನರ್ ದಂಪತಿಯೂ ಅದೇ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಡೇವಿಡ್ ವಾರ್ನರ್ ಮತ್ತು ಪತ್ನಿ ಕ್ಯಾಂಡಿಸ್ ವಾರ್ನರ್ ಬುಟ್ಟ ಬೊಮ್ಮ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅದರಲ್ಲೂ ವಾರ್ನರ್ ಅವರು ಸನ್ ರೈಸರ್ ಹೈದರಾಬಾದ್ ತಂಡದ ಜೆರ್ಸಿ ಹಾಕಿದ್ದು ವಿಶೇಷವಾಗಿತ್ತು. ವಿಡಿಯೋದಲ್ಲಿ ವಾರ್ನರ್ ಮಗಳು ಕೂಡಾ ಹಿಂದಿನಿಂದ ಕುಣಿಯುತ್ತಾ ಸಾಗುತ್ತಾರೆ.
ಕೆಲ ದಿನಗಳ ಹಿಂದೆ ಮಗಳ ಜೊತೆ ವಾರ್ನರ್ ಶೀಲಾ ಕಿ ಜವಾನಿ ಹಾಡಿಗೆ ಸ್ಟೆಪ್ ಹಾಕಿದ್ದರು. ಅದು ಕೂಡಾ ಭಾರಿ ವೈರಲ್ ಆಗಿತ್ತು.
View this post on Instagram
It’s tiktok time #buttabomma get out of your comfort zone people lol @candywarner1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!