ಥೀಮ್ ನಂಬರ್ ಫೋರ್
Team Udayavani, Mar 19, 2019, 12:30 AM IST
ಪ್ಯಾರಿಸ್: ರವಿವಾರವಷ್ಟೇ “ಇಂಡಿಯನ್ ವೆಲ್ಸ್’ ಪ್ರಶಸ್ತಿ ಜಯಿಸಿದ ಆಸ್ಟ್ರಿಯದ ಡೊಮಿನಿಕ್ ಥೀಮ್ ನೂತನ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿ ಜೀವನದ ಅತ್ಯುತ್ತಮ ರ್ಯಾಂಕಿಂಗ್ ಆಗಿದೆ.
2017ರಲ್ಲಿ ಸ್ವಲ್ಪ ಸಮಯ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನ ಅಲಂಕರಿಸಿದ್ದ ಥೀಮ್ “ಇಂಡಿಯನ್ ವೆಲ್ಸ್ ‘ ಕೂಟದ ಫೈನಲ್ನಲ್ಲಿ ಫೆಡರರ್ ಅವರನ್ನು ಸೋಲಿಸಿ ನೂತನ ರ್ಯಾಂಕಿಂಗ್ನಲ್ಲಿ 4 ಸ್ಥಾನಗಳ ಏರಿಕೆ ಕಂಡರು. ಇದೇ ವೆಇಳೆ ಫೆಡಡರ್ ಒಂದು ಸ್ಥಾನ ಕೆಳಗಿಳಿದು 5ನೇ ಸ್ಥಾನಕ್ಕೆ ತಲುಪಿದ್ದಾರೆ. ಅಗ್ರ 3 ಸ್ಥಾನಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ನೊವಾಕ್ ಜೊಕೋವಿಕ್, ರಫೆಲ್ ನಡಾಲ್ ಹಾಗೂ ಅಲೆಕ್ಸಾಂಡರ್ ಜ್ವೆರೇವ್ ಅಗ್ರ 3ರಲ್ಲೇ ಉಳಿದುಕೊಂಡಿದ್ದಾರೆ. ಆಜೇìಂಟಿನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ 3 ಸ್ಥಾನಗಳ ಇಳಿಕೆ ಕಂಡು 8ನೇ ಸ್ಥಾನದಲ್ಲಿದ್ದಾರೆ.
ಟಾಪ್ 10 ರ್ಯಾಂಕಿಂಗ್
1. ನೊವಾಕ್ ಜೊಕೋವಿಕ್ 10,990
2. ರಫೆಲ್ ನಡಾಲ್ 8,725
3. ಅಲೆಕ್ಸಾಂಡರ್ ಜ್ವೆರೇವ್ 6,630
4. ಡೊಮಿನಿಕ್ ಥೀಮ್ 4,755
5. ರೋಜರ್ ಫೆಡರರ್ 4,600
6. ಕೀ ನಿಶಿಕೊರಿ 4,235
7. ಕೆವಿನ್ ಆ್ಯಂಡರ್ಸನ್ 4,115
8. ಮಾರ್ಟಿನ್ ಡೆಲ್ ಪೊಟ್ರೊ 3,585
9. ಜಾನ್ ಇಸ್ನರ್ 3,485
10. ಸ್ಟೆಫನಸ್ ಸಿಸಿಪಸ್ 3,160