Dubai ಎಲೆಕ್ಟ್ರಿಕ್ ಸ್ಕೂಟರ್ ಕಪ್’ ಸ್ಪರ್ಧೆ: ಅನೀಶ್ ಡಿ. ಶೆಟ್ಟಿ ದ್ವಿತೀಯ ಸ್ಥಾನಿ
Team Udayavani, Dec 25, 2023, 12:07 AM IST
ದುಬಾೖ: ಇಲ್ಲಿ ನಡೆದ ಮೊದಲ ಆವೃತ್ತಿಯ “ದುಬಾೖ ಎಲೆಕ್ಟ್ರಿಕ್ ಸ್ಕೂಟರ್ ಕಪ್’ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ಪುತ್ತಿಗೆಯ ಅನೀಶ್ ಡಿ. ಶೆಟ್ಟಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಬೂಝ್ ರೇಸಿಂಗ್ ತಂಡವನ್ನು ಪ್ರತಿನಿಧಿಸಿದ್ದರು. ಫೇಡ್ ಫಿಟ್ ಟೀಮ್ನ ಸದಸ್ಯ, ಜಪಾನ್ನ ಹಿಕಾರಿ ಒಕುಬೋ ಪ್ರಥಮ, ಬ್ಲೋಂಡಿ ಸೂಪರ್ ಕಾರ್ ಟೀಮ್ನ ಸದಸ್ಯ ಸ್ವಿಜರ್ಲೆಂಡ್ನ ಮಥಿಯಾಸ್ ನೀರೋ ತೃತೀಯ ಸ್ಥಾನ ಗಳಿಸಿದರು. ದುಬಾೖ ನ್ಪೋರ್ಟ್ಸ್ ಕ್ಲಬ್ ಕೌನ್ಸಿಲ್ನ ಚೇರ್ಮನ್ ಶೇಖ್ ಮನ್ಸೂರ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕೊ¤àಂ ಅವರು ಪ್ರಶಸ್ತಿ ಪ್ರದಾನ ಮಾಡಿದರು.