England ಜಾಕ್ ಲೀಚ್ ಗಾಯಾಳು : ದ್ವಿತೀಯ ಟೆಸ್ಟ್ಗೆ ಅನುಮಾನ
Team Udayavani, Feb 1, 2024, 12:24 AM IST
ವಿಶಾಖಪಟ್ಟಣ: ಇಂಗ್ಲೆಂಡ್ನ ಅನುಭವಿ ಸ್ಪಿನ್ನರ್ ಜಾಕ್ ಲೀಚ್ ಗಾಯಾಳಾಗಿದ್ದು, ಬುಧವಾರದ ಅಭ್ಯಾಸದಿಂದ ಹೊರಗುಳಿದಿದ್ದಾರೆ. ಇದರಿಂದ ಶುಕ್ರವಾರ ಆರಂಭಗೊಳ್ಳಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಹೈದರಾಬಾದ್ ಟೆಸ್ಟ್ ಪಂದ್ಯದ ಮೊದಲ ದಿನ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಜಾಕ್ ಲೀಚ್ ಎಡ ಮೊಣಕಾಲಿನ ನೋವಿಗೆ ಸಿಲುಕಿದ್ದರು. ನೋವಿನಲ್ಲೇ ಆಡಿದ್ದರು. ಆದರೆ ಈ ನೋವು ಇನ್ನೂ ವಾಸಿಯಾಗಿಲ್ಲ. ತಂಡದ ಫಿಸಿಯೋ ಅವರೇ ಲೀಚ್ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಅವರು ಅಭ್ಯಾಸಕ್ಕೆ ಇಳಿಯಲಿಲ್ಲ. ಗುರುವಾರ ಅವರ ಪರಿಸ್ಥಿತಿಯನ್ನು ಗಮನಿಸಿದ ಬಳಿಕ ಮುಂದಿನ ನಿರ್ಧಾರಕ್ಕೆ ಬರಲಾಗುವುದು ಎಂದು ತಂಡದ ಆರಂಭಕಾರ ಜಾಕ್ ಕ್ರಾಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಶೀರ್ಗೆ ಅವಕಾಶ
ಒಂದು ವೇಳೆ ಜಾಕ್ ಲೀಚ್ ಆಡದೇ ಹೋದರೆ ಇವರ ಸ್ಥಾನದಲ್ಲಿ ಆಫ್ಸ್ಪಿನ್ನರ್ ಶೋಯಿಬ್ ಬಶೀರ್ ಬೌಲಿಂಗ್ ದಾಳಿಗಿಳಿಯಲಿದ್ದಾರೆ. ವೀಸಾ ಸಿಗದ ಕಾರಣ ಬಶೀರ್ ವಿಳಂಬವಾಗಿ ಭಾರತಕ್ಕೆ ಆಗಮಿಸಿದ್ದರು. ಹೀಗಾಗಿ ಮೊದಲ ಟೆಸ್ಟ್ನಲ್ಲಿ ಆಡಲಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ