ನೈಜೀರಿಯ, ಘಾನಾ ಫುಟ್ಬಾಲ್ ನಿಷೇಧ?
Team Udayavani, Aug 16, 2018, 6:00 AM IST
ಬರ್ಲಿನ್: ಆಫ್ರಿಕಾ ರಾಷ್ಟ್ರಗಳಾದ ನೈಜೀರಿಯ ಮತ್ತು ಘಾನಾ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ಫಿಫಾದಿಂದ ನಿಷೇಧಕ್ಕೊಳಗಾಗುವ ಕಾಲ ಸನ್ನಿಹಿತವಾಗಿದೆ.
ಎರಡೂ ರಾಷ್ಟ್ರಗಳ ಫುಟ್ಬಾಲ್ ಸಂಸ್ಥೆಗಳ ಮೇಲೆ ಅಲ್ಲಿನ ರಾಜಕೀಯ ವ್ಯವಸ್ಥೆಯ ಹಸ್ತಕ್ಷೇಪ ತೀವ್ರವಾಗಿರುವುದು, ಸರಕಾರವೇ ಆಡಳಿತ ನಡೆಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಆ. 20ರೊಳಗೆ ಇದು ಸರಿಯಾಗದಿದ್ದರೆ ಎರಡೂ ರಾಷ್ಟ್ರಗಳನ್ನು ನಿಷೇಧಿಸಲಾಗುವುದು ಎಂದು ಫಿಫಾ ತಿಳಿಸಿದೆ. ನಿಷೇಧ ಹೇರಿದರೂ ಸದ್ಯ ಫ್ರಾನ್ಸ್ನಲ್ಲಿ ವಿಶ್ವಕಪ್ ಆಡುತ್ತಿರುವ ನೈಜೀರಿಯದ ಅಂಡರ್-20 ಮಹಿಳಾ ತಂಡಕ್ಕೇನೂ ತೊಂದರೆ ಇಲ್ಲ ಎಂದು ಫಿಫಾ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.