ಫಿಫಾ ವನಿತಾ ವಿಶ್ವಕಪ್‌:ಕ್ವಾರ್ಟರ್‌ ಫೈನಲಿಗೆ ಇಂಗ್ಲೆಂಡ್‌, ಫ್ರಾನ್ಸ್‌

Team Udayavani, Jun 25, 2019, 5:03 AM IST

ಲೆ ಹಾವ್ರೆ (ಫ್ರಾನ್ಸ್‌): ಆತಿಥೇಯ ಫ್ರಾನ್ಸ್‌ ಸಹಿತ 4 ತಂಡಗಳು ವನಿತಾ ವಿಶ್ವಕಪ್‌ ಫ‌ುಟ್ಬಾಲ್ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್ ಪ್ರವೇಶಿಸಿವೆ. ಉಳಿದ 3 ತಂಡಗಳೆಂದರೆ ನಾರ್ವೆ, ಇಂಗ್ಲೆಂಡ್‌ ಮತ್ತು ಜರ್ಮನಿ.

ಫ್ರಾನ್ಸ್‌ 2-1 ಗೋಲುಗಳಿಂದ ಬಲಿಷ್ಠ ಬ್ರಝಿಲ್ಗೆ ಆಘಾತವಿಕ್ಕಿತು. ಜರ್ಮನಿ 3-0 ಗೋಲುಗಳಿಂದ ನೈಜೀರಿಯಾವನ್ನು ನೆಲಕ್ಕೆ ಕೆಡವಿತು.

ನಾರ್ವೆ-ಆಸ್ಟ್ರೇಲಿಯ ನಡುವಿನ ಮುಖಾಮುಖೀ ಅತ್ಯಂತ ರೋಚಕವಾಗಿತ್ತು. ಇದು 1-1 ಡ್ರಾ ಬಳಿಕ ಶೂಟೌಟ್‌ಗೆ ವಿಸ್ತರಿಸಲ್ಪಟ್ಟಿತು. ಇಲ್ಲಿ ನಾರ್ವೆ 4-1 ಗೋಲುಗಳ ಮೇಲುಗೈ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್‌ 3-0 ಗೋಲುಗಳಿಂದ ಕ್ಯಾಮರೂನನ್ನು ಕೆಡವಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ