ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ನಂ.1

ನಂ.1ಸ್ಥಾನಕ್ಕೇರಿದ ಕಾಂಗರೂ ನಾಡಿನ ಎರಡನೇ ಆಟಗಾರ್ತಿ

Team Udayavani, Jun 25, 2019, 5:06 AM IST

ಸಿಡ್ನಿ: ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ವಿಶ್ವದ ನೂತನ ನಂಬರ್‌ ವನ್‌ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಟೆನಿಸ್‌ ತ್ಯಜಿಸಿ ಕ್ರಿಕೆಟ್ ಆಡಿದ್ದ ಬಾರ್ಟಿ ಮತ್ತೆ ಟೆನಿಸ್‌ ಅಂಗಣಕ್ಕೆ ಜಿಗಿದು ಅದ್ಭುತ ಸಾಧನೆಯನ್ನೇ ಮಾಡಿರುವುದು ವಿಶೇಷ.

ನಂ.1 ಸ್ಥಾನಕ್ಕೇರಿದ ದೇಶದ ಎರಡನೇ ವನಿತೆ ಎನಿಸಿರುವ ಬಾರ್ಟಿ ಅವರನ್ನು ‘ಟೆನಿಸ್‌ ಆಸ್ಟ್ರೇಲಿಯ’ ಮುಕ್ತಕಂಠದಿಂದ ಹೊಗಳಿದೆ. 1976ರಲ್ಲಿ ಆಸ್ಟ್ರೇಲಿಯದ ಇವೋನಿ ಗೂಲಗಾಂಗ್‌ ಕಾವ್ಲೆ ಮೊದಲ ಸಲ ನಂ.1 ಸ್ಥಾನ ಅಲಂಕರಿಸಿದ್ದರು.

ಫ್ರೆಂಚ್ ಓಪನ್‌ ಚಾಂಪಿಯನ್‌ ಆಗಿರುವ ಬಾರ್ಟಿ ರವಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟೆನಿಸ್‌ ಕೂಟದ ಫೈನಲ್ನಲ್ಲಿ ಜೂಲಿಯಾ ಜಾರ್ಜಸ್‌ ಅವರನ್ನು ಸೋಲಿಸಿ ಡಬ್ಲ್ಯುಟಿಎ ಪ್ರಶಸ್ತಿ ಗೆಲ್ಲುವ ಮೂಲಕ ಅಗ್ರಸ್ಥಾನಕ್ಕೆ ಲಗ್ಗೆ ಇರಿಸಿದರು. ಈ ಕೂಟದಲ್ಲಿ ಸೋಲನುಭವಿಸಿದ ಕಾರಣ ಜಪಾನಿನ ನವೋಮಿ ಒಸಾಕ ನಂ.1 ಸ್ಥಾನದಿಂದ ಕೆಳಗಿಳಿದಿದ್ದರು.

ಆಸ್ಟ್ರೇಲಿಯದ ನಂ.1 ತಾರೆಗಳು
1976ರಲ್ಲಿ ಸ್ವಲ್ಪ ಸಮಯ ಅಗ್ರಸ್ಥಾನದಲ್ಲಿದ್ದ ಕಾವ್ಲೆ ಮತ್ತು ಬಾರ್ಟಿ ಮಾತ್ರವಲ್ಲದೇ ಆಸ್ಟ್ರೇಲಿ ಯದ ದಿಗ್ಗಜ ಟೆನಿಸ್‌ ತಾರೆಯರಾದ ಜಾನ್‌ ನ್ಯೂಕಾಂಬೆ, ಪ್ಯಾಟ್ ರ್ಯಾಫ್ಟರ್‌ ಮತ್ತು ಲೇಟನ್‌ ಹೆವಿಟ್ ಕೂಡ ವಿಶ್ವದ ನಂ.1 ಟೆನಿಸಿಗರಾಗಿ ಗುರುತಿಸಿ ಕೊಂಡಿದ್ದರು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ