ನಿವೃತ್ತಿ ಘೋಷಿಸಿದ ಮತ್ತೊಬ್ಬ ಭಾರತೀಯ ಕ್ರಿಕೆಟಿಗ

ಕೆನಡಾದ ಗ್ಲೋಬಲ್ ಟಿ -ಟ್ವೆಂಟಿ ಆಡಲು ನಿವೃತ್ತಿ

Team Udayavani, Jun 25, 2019, 1:29 PM IST

ಮುಂಬೈ: ವಿದೇಶಿ ಟಿ – ಟ್ವೆಂಟಿ ಲೀಗ್ ಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಗೆ ರಾಜೀನಾಮೆ ನೀಡಿದ ಬೆನ್ನಲ್ಲಿ ಮತ್ತೊಬ್ಬ ಭಾರತೀಯ ಇದೇ ಕಾರಣಕ್ಕೆ ರಾಜಿನಾಮೆ ನೀಡಿದ್ದಾರೆ. ಪಂಜಾಬ್ ವೇಗಿ ಮನ್ ಪ್ರೀತ್ ಸಿಂಗ್ ಗೋನಿ ಈಗ ರಾಜಿನಾಮೆ ನೀಡಿ ವಿದೇಶಿ ಕೂಟಗಳಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೆನಡಾದಲ್ಲಿ ನಡೆಯುವ ಗ್ಲೋಬಲ್ ಟಿ ಟ್ವೆಂಟಿ ಕೂಟದಲ್ಲಿ ಗೋನಿ ಟೊರ‍್ಯಾಂಟೋ ನ್ಯಾಶನಲ್ ಪರ ಆಡಲಿದ್ದಾರೆ. ಯುವರಾಜ್ ಸಿಂಗ್ ಕೂಡಾ ಇದೇ ತಂಡವನ್ನು ಪ್ರತಿನಿಧಿಸಲಿದ್ದು, ಜುಲೈ 25ರಿಂದ ಕೂಟ ಆರಂಭವಾಗಲಿದೆ.

2008ರ ಜೂನ್ ನಲ್ಲಿ ಹಾಂಕಾಂಗ್ ವಿರುದ್ಧ ಭಾರತ ತಂಡಕ್ಕೆ ಪದಾರ್ಪಣೆಯಾದ ಗೋನಿ, ಆಡಿದ್ದು ಕೇವಲ ಎರಡು ಅಂತಾರಾಷ್ಟ್ರೀಯ ಪಂದ್ಯ. ಅದೇ ಸರಣಿಯ ಬಾಂಗ್ಲಾದೇಶದ ವಿರುದ್ಧದ ಪಂದ್ಯ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಕ್ಕನ್ ಚಾರ್ಜರ್ಸ್, ಕಿಂಗ್ಸ್ ಇಲೆವನ್ ಪಂಜಾಬ್ ಪರ ಮನ್ ಪ್ರೀತ್ ಸಿಂಗ್ ಗೋನಿ ಆಡಿದ್ದರು. ಐಪಿಎಲ್ ನಲ್ಲಿ 44 ಪಂದ್ಯಗಳಲ್ಲಿ ಗೋನಿ 37 ವಿಕೆಟ್ ಕಬಳಿಸಿದ್ದರು.

“ಗೋನಿಯವರು ನಮ್ಮ ತಂಡದ ಬೌಲಿಂಗ್ ಅಸ್ತ್ರವಾಗಿದ್ದರು. ಅವರ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತೇವೆ” ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೆಶನ್ ನ ವಕ್ತಾರ ಸುಶೀಲ್ ಕಪೂರ್ ಹೇಳಿಕೆ ನೀಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ