ವಿಂಡೀಸ್‌ ಮಾಜಿ ಕ್ರಿಕೆಟಿಗ ಲಾರಾ ಆಸ್ಪತ್ರೆಗೆ ದಾಖಲು

Team Udayavani, Jun 25, 2019, 4:02 PM IST

ಮುಂಬಯಿ: ವೆಸ್ಟ್‌ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್‌ ಲಾರಾ ಅವರನ್ನು ಮಂಗಳವಾರ ಮಧ್ಯಾಹ್ನ ಮುಂಬಯಿಯ ಗ್ಲೋಬಲ್‌ ಆಸ್ಪತ್ರೆಗೆ ದಾಖಲಿಸಲಾಗಿರುವ ಬಗ್ಗೆ ವರದಿಯಾಗಿದೆ.

ಎದೆ ನೋವು ಎಂದು ಹೇಳಿದ ಬಳಿಕ ಲಾರಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಆಸ್ಪತ್ರೆ ಇದುವರೆಗೆ ಯಾವುದೇ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಆಸ್ಪತ್ರೆಯ ವಿವರಗಳಿಗಾಗಿ ಎದುರು ನೋಡಲಾಗುತ್ತಿದೆ.

50 ರ ಹರೆಯದ ಲಾರಾ ವಿಂಡೀಸ್‌ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಟ 400 ರನ್‌ ಸಿಡಿಸಿದ ದಾಖಲೆ ಲಾರಾ ಅವರ ಹೆಸರಿನಲ್ಲಿದೆ. ಟೆಸ್ಟ್‌ನಲ್ಲಿ 34 , ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 19 ಶತಕಗಳನ್ನು ಲಾರಾ ಸಿಡಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ