ಶಮಿ ಜತೆ ಜಗಳ: ಮೂವರ ಬಂಧನ
Team Udayavani, Jul 19, 2017, 9:13 AM IST
ಕೋಲ್ಕತಾ: ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಜತೆ ಜಗಳವಾಡಿದ ಮೂವರನ್ನು ಕೋಲ್ಕತಾದ ಜಾದವ್ಪುರ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ವೇಗಿ ಶಮಿ ತಮ್ಮ ಕೋಲ್ಕತಾದ ಅಪಾರ್ಟ್ ಮೆಂಟ್ಗೆ ಕಾರಿನನಲ್ಲಿ ತೆರಳುತ್ತಿದ್ದರು. ಅಪಾರ್ಟ್ಮೆಂಟ್ಗೆ ಬಂದಾಗ ಶಮಿ ಕಾರಿಗೆ, ಬೈಕೊಂದು ಅಡ್ಡವಾಗಿತ್ತು. ಈ ಸಂದರ್ಭದಲ್ಲಿ ಸಣ್ಣ ಮಾತಿನ ಚಕಮಕಿ ನಡೆದಿದ್ದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಶಮಿ ಮನೆಗೆ ತೆರಳಿದ್ದರು. ಅನಂತರ ಶಮಿ ಮನೆಯ ವರೆಗೂ ಬಂದ ಮೂವರು ಮತ್ತೆ ಜಗಳ ಮಾಡಿದ್ದರು. ಆಗ ಅಪಾರ್ಟ್ಮೆಂಟ್ನ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿ ಶಮಿ ನೆರವಿಗೆ ಬಂದಿದ್ದರು. ಅವರ ಮೇಲೆಯೂ ಹಲ್ಲೆಗೆ ಯತ್ನಿಸಲಾಯಿತು.
ಇದರ ವಿರುದ್ಧ ಶಮಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.