ಕೋಚ್‌ ರವಿಶಾಸ್ತ್ರಿ  ಟೀಮ್‌ ರೆಡಿ


Team Udayavani, Jul 19, 2017, 9:10 AM IST

19-SPO-6.gif

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ರವಿಶಾಸ್ತ್ರಿ  ಬೇಡಿಕೆಗಳಿಗೆ ಬಿಸಿಸಿಐ ಪೂರ್ಣ ಬಾಗಿದೆ. ಶಾಸ್ತ್ರಿ ಬೇಡಿಕೆಯಂತೆ ಗೆಳೆಯ ಭರತ್‌ ಅರುಣ್‌ ಅವರನ್ನೇ ಬೌಲಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ. ಕ್ಷೇತ್ರ ರಕ್ಷಣೆ ಕೋಚ್‌ ಆಗಿ ಆರ್‌. ಶ್ರೀಧರ್‌ ಅವರನ್ನು ನೇಮಕ ಮಾಡಲಾಗಿದೆ. 

ಈ ಬೆಳವಣಿಗೆಯೊಂದಿಗೆ ಮೊನ್ನೆಯಷ್ಟೇ ಬೌಲಿಂಗ್‌ ಸಲಹೆಗಾರ ಎಂದು ಬಿಸಿಸಿಐನಿಂದಲೇ ನೇಮಿಸಲ್ಪಟ್ಟಿದ್ದ ಜಹೀರ್‌ ಖಾನ್‌, ಬ್ಯಾಟಿಂಗ್‌ ಸಲಹೆಗಾರ ರಾಹುಲ್‌ ದ್ರಾವಿಡ್‌  ಪಾತ್ರವೇನು ಎಂಬ ಬಗ್ಗೆ ಗೊಂದಲಗಳು ಶುರುವಾಗಿವೆ. ಮತ್ತೂಂದು ವಿವಾದಕ್ಕೆ ನಾಂದಿಯಾಗಿದೆ.

ಇದು ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರಿರುವ ಉನ್ನತ ಸಲಹಾ ಸಮಿತಿಗೆ ಬಿಸಿಸಿಐ ಮಾಡಿದ ಅವಮಾನ ಎಂದು ವಿಶ್ಲೇಷಿಸಲಾಗಿದೆ. ಈ ಸದಸ್ಯರು ಜು. 11ರಂದು ರವಿಶಾಸ್ತ್ರಿಯನ್ನು ಮುಖ್ಯ ಕೋಚ್‌ ಆಗಿ ನೇಮಿಸಿದ್ದರು. ಆ ವೇಳೆ ಜಹೀರ್‌ ಅವರನ್ನು ಬೌಲಿಂಗ್‌ ಸಲಹೆಗಾರರನ್ನಾಗಿ, ದ್ರಾವಿಡ್‌ ಅವರನ್ನು ಬ್ಯಾಟಿಂಗ್‌ ಸಲಹೆಗಾರರನ್ನಾಗಿ ಘೋಷಿ ಸಲಾಗಿತ್ತು. ಈ ಹೊಸ ಘೋಷಣೆ ಮೂಲಕ ಬಿಸಿಸಿಐ ಹಲವು ವಿವಾದಗಳು, ಗೊಂದಲಗಳಿಗೆ ಕಾರಣವಾಗಿದೆ. ಇಂತಹ ಗೊಂದಲಗಳಿಗೆ ಆಸ್ಪದ ನೀಡಿದ ಬಿಸಿಸಿಐ ಬಗ್ಗೆ ಆಕ್ರೋಶ ಶುರುವಾಗಿದೆ.

ಇನ್ನಿತರ ನೇಮಕಗಳು
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ, ರವಿಶಾಸಿŒ ಬಯಸಿದ ವ್ಯಕ್ತಿಗಳನ್ನೇ ಆಯಾ ಸ್ಥಾನಕ್ಕೆ ನೇಮಿಸಿದ್ದಾರೆ. ಪ್ಯಾಟ್ರಿಕ್‌ ಫ‌ರ್ಹಾದ್‌ ದೈಹಿಕ ತರಬೇತುದಾರ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಇದುವರೆಗೆ ಬ್ಯಾಟಿಂಗ್‌ ಕೋಚ್‌ ಆಗಿದ್ದ ಸಂಜಯ್‌ ಬಂಗಾರ್‌ ಸಹಾಯಕ ಕೋಚ್‌ ಆಗಿ ಭಡ್ತಿ ಪಡೆ ದಿದ್ದಾರೆ. ಇವರೆಲ್ಲರರೂ 2019ರ ಏಕದಿನ ವಿಶ್ವ ಕಪ್‌ ವರೆಗೆ ಹುದ್ದೆಯಲ್ಲಿರುತ್ತಾರೆ.

ಬೌಲಿಂಗ್‌ ಕೋಚ್‌ ಆಗಿರುವುದರಿಂದ ಭರತ್‌ ಅರುಣ್‌, ಆರ್‌ಸಿಬಿ ತಂಡದ ಸಹಾಯಕ ಕೋಚ್‌ ಸ್ಥಾನಕ್ಕೆ ವಿದಾಯ ಹೇಳಬೇಕಾಗುತ್ತದೆ. ರಾಷ್ಟ್ರೀಯ ತಂಡದ ಸೇವೆಯಲ್ಲಿರುವವರು ಅನ್ಯ ತಂಡದ ಜವಾಬ್ದಾರಿ ಹೊಂದುವುದು ಸ್ವಹಿತಾಸಕ್ತಿ ಎಂದು ಹೇಳಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ರವಿಶಾಸ್ತ್ರಿ, ಇದು ತಮ್ಮ ತಂಡ ಎಂದು ಹೇಳಿಕೊಂಡರು. ಆದರೆ ದ್ರಾವಿಡ್‌, ಜಹೀರ್‌ ಖಾನ್‌ ಪಾತ್ರದ ಬಗ್ಗೆ ಖಚಿತವಾಗಿ ಏನೂ ನುಡಿಯಲಿಲ್ಲ. ಬಿಸಿಸಿಐ ಯಾವಾಗ ಬಯಸು ತ್ತದೋ ಆಗ ಅವರು ನಮ್ಮ ಜೊತೆಗಿರುತ್ತಾರೆ ಎಂದಷ್ಟೇ ಹೇಳಿದ್ದಾರೆ.

ಆದರೆ ಅಚ್ಚರಿ ಮೂಡಿಸಿದ್ದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಹೇಳಿಕೆ. ಅವರ ಪ್ರಕಾರ ಯಾವುದೇ ಗೊಂದಲಗಳು ನಡೆದೇ ಇಲ್ಲವಂತೆ. “ಬಿಸಿಸಿಐಗೆ ಈ ಬಗ್ಗೆ ಎಲ್ಲವೂ ಸ್ಪಷ್ಟವಿತ್ತು. ರವಿಶಾಸ್ತ್ರಿ ತಮ್ಮದೇ ತಂಡವನ್ನು ಬಯಸಿರುವುದು ಮೊದಲೇ ಗೊತ್ತಿತ್ತು. ದ್ರಾವಿಡ್‌, ಜಹೀರ್‌ ಖಾನ್‌ ಅವರು ಸಲಹೆಗಾರರಷ್ಟೇ’ ಎಂದು ಹೇಳಿದ್ದಾರೆ.

ರವಿಶಾಸ್ತ್ರಿ ತಾಳಕ್ಕೆ ಕುಣಿದ ಬಿಸಿಸಿಐ?
ರವಿಶಾಸ್ತ್ರಿಯನ್ನು ಕೋಚ್‌ ಎಂದು ನೇಮಿಸಿದ್ದಾಗಲೇ ಜಹೀರ್‌ ಖಾನ್‌ ಅವರನ್ನು ಬೌಲಿಂಗ್‌ ಸಲಹೆಗಾರ ಎಂದೂ, ದ್ರಾವಿಡ್‌ ಸಲಹೆಗಾರ ಎಂದೂ ಪ್ರಕಟಿಸಲಾಗಿತ್ತು. ಈ ಪ್ರಕಟನೆ ಬೆನ್ನಲ್ಲೇ ವಿವಾದಗಳೂ ಹುಟ್ಟಿ ಕೊಂಡಿದ್ದವು. ಸಚಿನ್‌, ಸೌರವ್‌, ಲಕ್ಷ್ಮಣ್‌ ನೇತೃತ್ವದ ಕೋಚ್‌ ಆಯ್ಕೆ ಸಮಿತಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಈ ನೇಮಕಾತಿ ಮಾಡಿದೆ ಎಂದು ಸುಪ್ರೀಂ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳು ಹೇಳಿಕೆ ನೀಡಿದ್ದರು. ಇದಕ್ಕೆ ಸಲಹಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿ, ನಾವು ರವಿಶಾಸ್ತ್ರಿಯನ್ನು ಕೇಳಿಯೇ ಈ ಆಯ್ಕೆ ಮಾಡಿದ್ದೇವೆ, ಈ ಬೆಳವಣಿಗೆಯಿಂದ ನಮಗೆ ಬೇಸರವಾಗಿದೆ ಎಂದು ತಿಳಿಸಿದ್ದರು.

ಆಡಳಿತಾಧಿಕಾರಿಗಳ ಹೇಳಿಕೆ ನಂತರ ಪರಿಸ್ಥಿತಿ ಪೂರ್ಣ ಬದಲಾಯಿತು. ಜಹೀರ್‌, ದ್ರಾವಿಡ್‌ ಹೆಸರು ನೇಪಥ್ಯಕ್ಕೆ ಸರಿಯಲಾರಂಭಿಸಿತು. ಬದಲಿಗೆ ಶಾಸ್ತ್ರಿ ಬಹುಕಾಲದ ಗೆಳೆಯ ಭರತ್‌ ಅರುಣ್‌ ಹೆಸರು ಮತ್ತೆ ಮುಂಚೂಣಿಗೆ ಬಂತು. ಶಾಸ್ತ್ರಿ ಬಿಸಿಸಿಐ ಆಡಳಿತಾಧಿಕಾರಿಗಳ ಭೇಟಿ ಮಾಡಿ ತಮಗೆ ಬೇಕಾದ ಸಿಬಂದಿ ನೇಮಿಸಿ ಎಂದು ಕೋರಿದ್ದಾರೆ ಎಂಬ ಮಾಹಿತಿಗಳೂ ಹೊರಬಿದ್ದವು. 

ಮಂಗಳವಾರ ಭರತ್‌ ಅರುಣ್‌ ಅವರನ್ನೇ ಬೌಲಿಂಗ್‌ ಕೋಚ್‌ ಆಗಿ ಪ್ರಕಟಿಸಲಾಯಿತು. ಈ ಬೆಳವಣಿಗೆಗಳನ್ನು ಗಮನಿಸಿದಾಗ ರವಿ ಶಾಸ್ತ್ರಿಗೆ ಬಿಸಿಸಿಐ ಪೂರ್ಣ ತಲೆಬಾಗಿದೆ ಎಂದೇ ವಿಶ್ಲೇಷಿಸಲಾಗಿದೆ.

ರವಿಶಾಸ್ತ್ರಿ  ನೇಮಕದ ವೇಳೆಯೂ ಗೊಂದಲ
ಸಹಾಯಕ ಕೋಚ್‌ಗಳ ಆಯ್ಕೆ ವೇಳೆ ನಡೆದಿರುವುದು ಹೊಸ ನಾಟಕ. ಆದರೆ ಜು. 11ರಂದು ರವಿಶಾಸ್ತ್ರಿ ಅವನ್ನು ಕೋಚ್‌ ಎಂದು ನೇಮಿಸುವ ಮುನ್ನ ಇಡೀ ಬಿಸಿಸಿಐ ಗೊಂದಲದ ಗೂಡಾಗಿತ್ತು. ಜು. 10ರಂದು ಕೋಚ್‌ ಹೆಸರನ್ನು ಘೋಷಿಸಲಾಗುತ್ತದೆಂದು ಆರಂಭದಲ್ಲಿ ಹೇಳಲಾಗಿತ್ತು. ಆ ದಿನ ಕೊಹ್ಲಿಯೊಂದಿಗೆ ಮಾತನಾಡಬೇಕೆಂದು ಹೇಳಿ ಮುಂದೂಡಲಾಯಿತು. ಜು.11ರಂದು ಘೋಷಣೆ ಖಚಿತ ಎನ್ನಲಾಯಿತು. ಮಧ್ಯಾಹ್ನದಷ್ಟೊತ್ತಿಗೆ ರವಿಶಾಸ್ತ್ರಿಯೇ ಕೋಚ್‌ ಎಂದು ಪ್ರಕಟಿಸಲಾಯಿತು. ಸಂಜೆ ವೇಳೆ ಯಾವುದೇ ನೇಮಕಾತಿಯಾಗಿಲ್ಲ, ಮಾಧ್ಯಮದಲ್ಲಿ ಬರುತ್ತಿರುವುದು ಸುಳ್ಳು ಎಂದು ಬಿಸಿಸಿಐ ಹೇಳಿತು. ರಾತ್ರಿ ಹತ್ತು ಗಂಟೆಗೆ ನಡೆದಿದ್ದೇ ಬೇರೆ. ದಿಢೀರನೆ ರವಿಶಾಸ್ತ್ರಿ ಕೋಚ್‌ ಎಂದು ಬಿಸಿಸಿಐ ಪ್ರಕಟಿಸಿತು. ಈ ನೇಮಕಕ್ಕೂ ಕೆಲವು ತಿಂಗಳ ಮುಂಚಿನಿಂದಲೇ ಭಾರೀ ವಿವಾದಗಳು ನಡೆಯುತ್ತಿದ್ದವು. ಅದು ಮಂಗಳವಾರದ ನೂತನ ಘೋಷಣೆ ಅನಂತರವೂ ಮುಕ್ತಾಯವಾಗಿಲ್ಲವೆನ್ನುವುದು ವಿಪರ್ಯಾಸ.

ಇದು ನನ್ನ ತಂಡ: ಶಾಸ್ತ್ರಿ
ನನ್ನ ಸಹಾಯಕ ಸಿಬಂದಿ ಯಾರು ಎಂಬ ಬಗ್ಗೆ ನನಗೆ ಖಚಿತವಿತ್ತು. ಈಗ ನೀವು ಯಾವ ಹೆಸರನ್ನು ಕೇಳಿದ್ದೀರೋ ಅದು ನನ್ನ ತಂಡ. ರಾಹುಲ್‌ ದ್ರಾವಿಡ್‌ ಮತ್ತು ಜಹೀರ್‌ ಖಾನ್‌ ಅದ್ಭುತ ಕ್ರಿಕೆಟಿಗರು. ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರ ಸಲಹೆ ನಮಗೆ ಅಮೂಲ್ಯವಾಗಿದೆ. ಬಿಸಿಸಿಐ ಯಾವಾಗ ಬಯಸುತ್ತದೋ ಆಗ ಅವರು ನಮ್ಮ ಜತೆಗಿರುತ್ತಾರೆ ಎಂದು ರವಿಶಾಸ್ತ್ರಿ  ಹೇಳಿದ್ದಾರೆ.

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.