ಫ್ರೆಂಚ್‌ ಓಪನ್‌ ಟೆನಿಸ್‌: ಉಪಾಂತ್ಯಕ್ಕೇರಿದ ಜೊಕೊ, ಸಿಸಿಪಸ್‌


Team Udayavani, Oct 8, 2020, 8:13 PM IST

ಫ್ರೆಂಚ್‌ ಓಪನ್‌ ಟೆನಿಸ್‌: ಉಪಾಂತ್ಯಕ್ಕೇರಿದ ಜೊಕೊ, ಸಿಸಿಪಸ್‌

ಪ್ಯಾರಿಸ್‌: ಟೆನಿಸ್‌ ದಿಗ್ಗಜ ನೊವಾಕ್‌ ಜೊಕೊವಿಕ್‌ ಫ್ರೆಂಚ್‌ ಓಪನ್‌ ಟೆನಿಸ್‌ನ ಉಪಾಂತ್ಯಕ್ಕೇರಿದ್ದಾರೆ. ಅವರೊಂದಿಗೆ ಸ್ಟೆಫಾನಸ್‌ ಸಿಸಿಪಸ್‌ ಕೂಡಾ ಮುಂದಿನ ಸುತ್ತಿಗೇರಿದ್ದಾರೆ. ಇವರಿಬ್ಬರ ನಡುವೆ ಉಪಾಂತ್ಯದಲ್ಲಿ ಹೋರಾಟ ನಡೆಯಲಿದೆ. ಆವೆ ಅಂಗಣದ ಮಾಸ್ಟರ್‌ ರಫೆಲ್‌ ನಡಾಲ್‌, ಇನ್ನೊಂದು ಉಪಾಂತ್ಯದಲ್ಲಿ ಡಿಯೊಗೆ ಸ್ವಾಜ್‌ಮನ್‌ರನ್ನು ಎದುರಿಸಲಿದ್ದಾರೆ.

ಬುಧವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಪುರುಷರ ಸಿಂಗಲ್ಸ್‌ನ ವಿಶ್ವ ನಂ.1 ಆಟಗಾರ ಜೊಕೊವಿಕ್‌, ಪ್ಯಾಬ್ಲೊ ಕರೆನೊ ಬುಸ್ಟರಿಂದ ಪೈಪೋಟಿ ಎದುರಿಸಿದರು. ಆದರೆ ಗೆಲುವನ್ನು ಬಿಟ್ಟುಕೊಡಲಿಲ್ಲ. ಮೊದಲ ಸೆಟ್‌ ಅನ್ನು ಜೊಕೊ ಕಳೆದುಕೊಂಡರು. ಮುಂದಿನ ಮೂರು ಸೆಟ್‌ಗಳನ್ನು ಸತತವಾಗಿ ಗೆದ್ದ ಜೊಕೊ ಯುಎಸ್‌ ಓಪನ್‌ ನೋವನ್ನು ಮರೆತರು. ಪ್ಯಾಬ್ಲೊ ವಿರುದ್ಧ ಜೊಕೊ ಗೆಲುವಿನ ಅಂತರ 4 -6, 6-2, 6-3, 6-4.

ಯುಎಸ್‌ ಓಪನ್‌ನಲ್ಲಿ ಇದೇ ಆಟಗಾರನ ವಿರುದ್ಧದ ಪಂದ್ಯದಲ್ಲಿ 1 ಸೆಟ್‌ ಮಾತ್ರ ಆಡಿದ್ದ ಜೊಕೊ, ಆ ಪಂದ್ಯವನ್ನು ಬಿಟ್ಟುಕೊಟ್ಟು, ಕೂಟದಿಂದ ಅನಿವಾರ್ಯವಾಗಿ ಹೊರ ನಡೆದಿದ್ದರು. ಆ ಸೆಟ್‌ನಲ್ಲಿ ಹಿನ್ನಡೆ ಸಾಧಿಸಿದ ಸಿಟ್ಟಲ್ಲಿ, ಕೈಯಲ್ಲಿದ್ದ ಚೆಂಡನ್ನು ತುಸು ನಿರ್ಲಕ್ಷ್ಯದಿಂದ ಹಿಂದಕ್ಕೆ ಎಸೆದ ವೇಳೆ ಚೆಂಡು ತೀರ್ಪುಗಾರ್ತಿಗೆ ಬಡಿಯಿತು. ನಿಯಮಾವಳಿಗಳ ಪ್ರಕಾರ ಜೊಕೊ ಕೂಟದಿಂದ ಹೊರ ನಡೆಯಬೇಕಾಯಿತು.

ಸಿಸಿಪಸ್‌ ಸೆಮೀಸ್‌ಗೆ
ಪುರುಷರ ಸಿಂಗಲ್ಸ್‌ನ ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಸ್ಟೆಫ‌ನಸ್‌ ಸಿಸಿಪಸ್‌ ಅವರು 7-5, 6-2, 6-3ರಿಂದ ಆಂಡ್ರೆ ರಬ್ಲೆವ್‌ರನ್ನು ಸೋಲಿಸಿ, ಕೂಟದಿಂದ ಹೊರಗಟ್ಟಿದರು. ಸಿಸಿಪಸ್‌ ಉಪಾಂತ್ಯದಲ್ಲಿ ನೊವಾಕ್‌ ಜೊಕೊವಿಕ್‌ರಂತಹ ಪ್ರಬಲ ಸ್ಪರ್ಧಿಯನ್ನು ಎದುರಿಸಬೇಕಾಗಿದೆ. ಇದು ಅವರಿಗೆ ಒಂದು ಅವಕಾಶವೂ ಹೌದು. ಇಲ್ಲಿ ಯಶಸ್ವಿಯಾಗಿ, ಅಂತಿಮಹಂತಕ್ಕೇರಿದರೆ ಭವಿಷ್ಯದ ತಾರೆಯಾಗಿ ಹೊರಹೊಮ್ಮಲೂಬಹುದು.

ಟಾಪ್ ನ್ಯೂಸ್

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.