Asia Cup 2023; ಗಿಲ್, ರೋಹಿತ್, ವಿರಾಟ್, ರಾಹುಲ್ ಔಟಾದ ರೀತಿಗೆ ಗಂಭೀರ್ ಅಸಮಾಧಾನ

Team Udayavani, Sep 14, 2023, 12:10 PM IST

Gambhir is upset with the way Gill, Rohit, Virat and Rahul got out

ಕೊಲಂಬೊ: ಏಷ್ಯಾ ಕಪ್ ಕೂಟದ ಸೂಪರ್ ಫೋರ್ ಸುತ್ತಿನ ಪಾಕ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಭಾರತೀಯ ಬ್ಯಾಟರ್ ಗಳು ಮುಂದಿನ ಲಂಕಾ ವಿರುದ್ಧ ಪರದಾಡಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಗ್ರ ಕ್ರಮಾಂಕದ ನಾಲ್ವರು 50ಕ್ಕಿಂತ ಹೆಚ್ಚಿನ ರನ್ ಮಾಡಿ ಮೆರೆದಿದ್ದರು. ಆದರೆ ಲಂಕಾ ವಿರುದ್ಧದ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರು ಯುವ ಸ್ಪಿನ್ನರ್ ದುನಿತ್ ವೆಲ್ಲಲಗೆ ಅವರ ಸ್ಪಿನ್ ಜಾಲಕ್ಕೆ ಒಳಗಾಗಿದ್ದರು.

20 ವರ್ಷದ ವೆಲ್ಲಲಗೆ ಅವರು ಪ್ರಮುಖ ಐವರು ಬ್ಯಾಟರ್ ಗಳನ್ನು ಔಟ್ ಮಾಡಿ ಟೀಂ ಇಂಡಿಯಾಗೆ ಕಡಿವಾಣ ಹಾಕಿದ್ದರು. ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಇದರ ಬಗ್ಗೆ ಮಾತನಾಡಿದ್ದು, ಅಗ್ರ ಕ್ರಮಾಂಕದ ಆಟಗಾರರು ಔಟಾದ ರೀತಿಯನ್ನು ಖಂಡಿಸಿದ್ದಾರೆ.

ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌ ಜತೆ ಮಾತನಾಡಿದ ಅವರು, ಭಾರತೀಯ ತಂಡದಲ್ಲಿ ವಿಶೇಷವಾಗಿ ಸ್ಪಿನ್ನರ್‌ ಗಳ ವಿರುದ್ಧ ಔಟಾಗುತ್ತಿರುವ ಆತಂಕಕಾರಿ ಮಾದರಿಯನ್ನು ಎತ್ತಿ ತೋರಿಸಿದರು. ಅಲ್ಲದೆ ಅವರು ಈ ಹಿಂದಿನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಉದಾಹರಣೆಯನ್ನು ನೀಡಿದರು.

ಇದನ್ನೂ ಓದಿ:Bollywood: ನಸೀರುದ್ದೀನ್ ಶಾ ಭಯೋತ್ಪಾದಕರನ್ನು ಇಷ್ಟಪಡುವವರು.. ವಿವೇಕ್‌ ಅಗ್ನಿಹೋತ್ರಿ

“ಇದು ಒಂದು ಮಾದರಿಯಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಆ ಪಂದ್ಯದಲ್ಲಿ ಚೆಂಡು ಸ್ವಲ್ಪ ಗ್ರಿಪ್ ಆಗುತ್ತಿದ್ದಾಗ ಭಾರತವು ಆ್ಯಡಂ ಜಂಪಾ ಮತ್ತು ಆಶ್ಟನ್ ಅಗರ್ ಅವರಂತಹ ಸ್ಪಿನ್ನರ್‌ಗಳ ವಿರುದ್ಧ ಸುಮಾರು 260 ರನ್‌ ಗಳನ್ನು ಬೆನ್ನಟ್ಟಲು ಪರದಾಡಿತ್ತು. ಯಾವಾಗ ಬಾಲ್ ಗ್ರಿಪ್ ಆಗುತ್ತವೆಯೋ ಆಗ ನಾವು (ಟೀಂ ಇಂಡಿಯಾ) ಕಷ್ಟಪಡುತ್ತೇವೆ. ನಾವು ಆಟವನ್ನು ಆಳವಾಗಿ ತೆಗೆದುಕೊಳ್ಳಬಹುದೇ ಎಂದು ನಮಗೆ ತಿಳಿದಿಲ್ಲ. ಈ ಪಿಚ್ 350-ರನ್‌ ಗಳ ವಿಕೆಟ್ ಅಲ್ಲ…ಇದು 270 ರನ್ ಪಿಚ್. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಸಾಫ್ಟ್ ಡಿಸ್ಮಿಸಲ್ ಮೂಲಕ ಔಟಾದರು, ಆದರೆ ಉಳಿದವರು ಫ್ರಂಟ್ ಫೂಟ್‌ ನಿಂದ ಔಟಾದರು” ಎಂದು ಗಂಭೀರ್ ಹೇಳಿದರು.

ತಾಂತ್ರಿಕತೆಯ ಬಗ್ಗೆ ಮಾತನಾಡಿದ ಗಂಭೀರ್, ಕೆಲವು ಎಸೆತಗಳನ್ನು ಬ್ಯಾಕ್‌ಫೂಟ್‌ನಲ್ಲಿ ಆಡುವುದು ಏಕೆ ಅಗತ್ಯ ಎಂದು ವಿವರಿಸಿದರು.

ಟಾಪ್ ನ್ಯೂಸ್

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.