ಪೇಸರ್‌ ಪೆರಿಯಸಾಮಿಗೆ ಭಾರೀ ಬೇಡಿಕೆ

Team Udayavani, Aug 18, 2019, 5:43 AM IST

ಚೆನ್ನೈ: “ಚಿಪಾಕ್‌ ಸೂಪರ್‌ ಗಿಲ್ಲೀಸ್‌’ 2019ನೇ ಸಾಲಿನ “ತಮಿಳುನಾಡು ಪ್ರೀಮಿಯರ್‌ ಲೀಗ್‌’ (ಟಿಎನ್‌ಪಿಎಲ್‌) ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದೆ. ಫೈನಲ್‌ನಲ್ಲಿ ಅದು ದಿಂಡಿಗಲ್‌ ಡ್ರ್ಯಾಗನ್ಸ್‌ ವಿರುದ್ಧ ರೋಚಕ ಜಯ ಸಾಧಿಸಿತು. ಈ ಕೂಟದ ಹಾಗೂ ಫೈನಲ್‌ ಪಂದ್ಯದ ರೂವಾರಿ, ಬಲಗೈ ಪೇಸ್‌ ಬೌಲರ್‌ ಗಣೇಶನ್‌ ಪೆರಿಯಸಾಮಿ ಅವರಿಗೀಗ ಭಾರೀ ಬೇಡಿಕೆ ಬಂದಿದೆ.

ಫೈನಲ್‌ನಲ್ಲಿ ಚಿಪಾಕ್‌ ಸೂಪರ್‌ ಗಿಲ್ಲೀಸ್‌ ತಂಡದ 127ರಷ್ಟು ಸಣ್ಣ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಪೆರಿಯಸಾಮಿ ಅವರ ಘಾತಕ ದಾಳಿ ಮಹತ್ವದ ಪಾತ್ರ ವಹಿಸಿತ್ತು. ಮೊದಲ ಓವರ್‌ನಲ್ಲೇ 2 ವಿಕೆಟ್‌ ಕಿತ್ತ ಅವರು, ಕೊನೆಯ ಓವರಿನಲ್ಲಿ 3 ವಿಕೆಟ್‌ ಉಡಾಯಿಸಿದರು. ಒಟ್ಟು ಸಾಧನೆ 15ಕ್ಕೆ 5 ವಿಕೆಟ್‌.

ಟಿಎನ್‌ಪಿಎಲ್‌ ದಾಖಲೆ
ಕೂಟದಲ್ಲಿ ಆಡಿದ 9 ಪಂದ್ಯಗಳಿಂದ 21 ವಿಕೆಟ್‌ ಉರುಳಿಸಿದ ಗಣೇಶನ್‌ ಪೆರಿಯಸಾಮಿ ಸಾಧನೆ ಟಿಎನ್‌ಪಿಎಲ್‌ ಇತಿಹಾಸದಲ್ಲೊಂದು ದಾಖಲೆ. ಶ್ರೀಲಂಕಾದ ಲಸಿತ ಮಾಲಿಂಗ ಶೈಲಿಯಲ್ಲೇ ಬೌಲಿಂಗ್‌ ನಡೆಸುವುದು ಇವರ ಹೆಚ್ಚುಗಾರಿಕೆ. ಹೀಗಾಗಿ ಮುಂದಿನ ಐಪಿಎಲ್‌ ಹರಾಜಿನ ವೇಳೆ ಗಣೇಶನ್‌ ಪೆರಿಯಸಾಮಿ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮುಂಚೂಣಿಯಲ್ಲಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ