ಏಷ್ಯಾ ಕಪ್: ಶಾಹೀನ್ ಶಾ ಅಫ್ರಿದಿ ಬದಲು ಮೊಹಮ್ಮದ್ ಹಸ್ನೇನ್
Team Udayavani, Aug 22, 2022, 11:17 PM IST
ಕರಾಚಿ: ಗಾಯಾಳಾಗಿ ಪಾಕಿಸ್ಥಾನದ ಏಷ್ಯಾ ಕಪ್ ತಂಡದಿಂದ ಹೊರಬಿದ್ದ ಶಾಹೀನ್ ಶಾ ಅಫ್ರಿದಿ ಸ್ಥಾನಕ್ಕೆ ಮೊಹಮ್ಮದ್ ಹಸ್ನೇನ್ ಅವರನ್ನು ಸೇರಿಸಿಕೊಳ್ಳಲಾಗಿದೆ.
22 ವರ್ಷದ ಪೇಸ್ ಬೌಲರ್ ಹಸ್ನೇನ್ ಈವರೆಗೆ 18 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ, 17 ವಿಕೆಟ್ ಉರುಳಿಸಿದ್ದಾರೆ.
ಟಿ20 ಲೀಗ್ಗಳಲ್ಲಿ ಕ್ವೆಟ್ಟಾ ಗ್ಲೆಡಿಯೇಟರ್, ಸಿಡ್ನಿ ಥಂಡರ್ ಮತ್ತು ಟ್ರಿನ್ಬಾಗೊ ನೈಟ್ರೈಡರ್ ತಂಡಗಳನ್ನು ಪ್ರತಿನಿಧಿಸಿದ್ದು, 100 ವಿಕೆಟ್ ಕೆಡವಿದ್ದಾರೆ.
ಪ್ರಸ್ತುತ ಹಸ್ನೇನ್ ಇಂಗ್ಲೆಂಡ್ನಲ್ಲಿ “ದಿ ಹಂಡ್ರೆಡ್’ ಲೀಗ್ನಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡವನ್ನು ಪ್ರತಿ ನಿಧಿಸುತ್ತಿದ್ದು, ಅಲ್ಲಿಂದಲೇ ಯುಎಇಗೆ ತೆರಳುವರು.
ಪಾಕಿಸ್ಥಾನ ತಂಡ: ಬಾಬರ್ ಆಜಂ (ನಾಯಕ), ಶದಾಬ್ ಖಾನ್, ಆಸಿಫ್ ಅಲಿ, ಫಕಾರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರವೂಫ್, ಇಫ್ತಿಕಾರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂ., ನಸೀಮ್ ಶಾ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ