World Cup; ಲಂಕಾ 326ಕ್ಕೆ ಆಲೌಟ್: ದಕ್ಷಿಣ ಆಫ್ರಿಕಾಕ್ಕೆ 102 ರನ್ ಜಯ
Team Udayavani, Oct 7, 2023, 10:31 PM IST
ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ರನ್ ಮಳೆಯೇ ಸುರಿಯಿತು. ಭಾರೀ ಮೊತ್ತ ಪೇರಿಸಿದ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ 102 ರನ್ ಜಯ ಸಾಧಿಸಿತು.
ಶ್ರೀಲಂಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾ ಪರ ಮೂವರು ಅತ್ಯಮೋಘ ಶತಕ ಸಿಡಿಸಿ 428 ರನ್ ಗಳ ಮೊತ್ತ ಕಲೆ ಹಾಕಲು ಕಾರಣವಾದರು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್, ವನ್ ಡೌನ್ ಆಟಗಾರ ವ್ಯಾನ್ ಡರ್ ಡ್ಯೂಸನ್ ಮತ್ತು ಏಡನ್ ಮಾರ್ಕ್ರಮ್ ಶತಕಗಳನ್ನು ಬಾರಿಸಿದರು.
ಇದನ್ನೂ ಓದಿ : World Cup 2023: ಲಂಕಾ ವಿರುದ್ಧ ಏಡನ್ ಮಾರ್ಕ್ರಮ್ ಸ್ಪೋಟಕ ಶತಕ; ವಿಶ್ವಕಪ್ ದಾಖಲೆ ಪತನ
ಭಾರೀ ಮೊತ್ತದ ಗುರಿ ಬೆನ್ನಟ್ಟಿದ ಲಂಕಾ ಅಷ್ಟೇನೂ ಹಗುರವಾಗಿ ಪರಿಗಣಿಸದಂತೆ ಪ್ರದರ್ಶನ ತೋರಿ ಮುನ್ನೂರರ ಗಡಿ ದಾಟಿತು. 44.5 ಓವರ್ ಗಳಲ್ಲಿ 326 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದು ಕೊಂಡಿತು. ಕುಸಾಲ್ ಮೆಂಡಿಸ್ 76, ಚರಿತ್ ಅಸಲಂಕಾ 79, ನಾಯಕ ದಸುನ್ ಶಣಕ 68 ರನ್ ಗಳಿಸಿ ಔಟಾದರು.ಸದೀರ ಸಮರವಿಕ್ರಮ 23, ಕಸುನ್ ರಜಿತಾ 33 ರನ್ ಗಳಿಸಿ ಔಟಾದರು. ಜೆರಾಲ್ಡ್ ಕೋಟ್ಜಿ 3,ಮಾರ್ಕೊ ಜಾನ್ಸೆನ್, ರಬಾಡ ಮತ್ತು ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರು. ಸ್ಪೋಟಕ ಶತಕ ಸಿಡಿಸಿದ ಮಾರ್ಕ್ರಾಮ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ