ವಿಶ್ವ ಬಾಕ್ಸಿಂಗ್ ಆತಿಥ್ಯದ ಅವಕಾಶ ಕಳೆದುಕೊಂಡ ಭಾರತ
Team Udayavani, Apr 30, 2020, 3:56 PM IST
ನವದೆಹಲಿ: 2021 ಪುರುಷರ ವಿಶ್ವ ಬಾಕ್ಸಿಂಗ್ ಕೂಟಕ್ಕೆ ಆತಿಥ್ಯ ವಹಿಸುವ ಅವಕಾಶವನ್ನು ಭಾರತ ಕಳೆದು ಕೊಂಡಿದೆ. ಆತಿಥೇಯ ಶುಲ್ಕವನ್ನು ಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಭಾರತ ಅವಕಾಶ ವಂಚಿತವಾಗಿದೆ.
ಇದೀಗ ದಂಡದ ರೂಪವಾಗಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಗೆ (ಎಐಬಿಎ) 37 ಸಾವಿರ ರೂ.ವನ್ನು ಕಟ್ಟಬೇಕಾಗಿದೆ.
ಮೊದಲ ಬಾರಿಗೆ ದೊಡ್ಡ ಕ್ರೀಡಾ ಕೂಟಕ್ಕೆ ಆತಿಥ್ಯ ವಹಿಸುವ ಅವಕಾಶ ಸಿಕ್ಕಿತ್ತು. ಆದರೆ ಇದೀಗ ಆತಿಥ್ಯದ ಪಾಲನ್ನು ಸರ್ಬಿಯಾದ ಬೆಲ್ಗ್ರೇಡ್ ಪಟ್ಟಣ ಬಾಚಿಕೊಂಡಿದೆ.
ಆತಿಥೇಯ ಶುಲ್ಕವನ್ನು ಹೊಸದಿಲ್ಲಿ ಭರಿಸಿದ ಕಾರಣ ಈ ಕೂಟದ ಒಪ್ಪಂದ ರದ್ದಾಗಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಏಐಬಿಎ) ಹೇಳಿಕೆ ನೀಡಿದೆ.