ಆಸೀಸ್‌ ಪ್ರವಾಸಕ್ಕೊಂದು ಅಭ್ಯಾಸ ಸರಣಿ


Team Udayavani, Nov 16, 2018, 6:15 AM IST

india-nz.jpg

ಮೌಂಟ್‌ ಮೌಂಗನಿ (ನ್ಯೂಜಿಲ್ಯಾಂಡ್‌): ನ್ಯೂಜಿಲ್ಯಾಂಡ್‌ ಪ್ರವಾಸದಲ್ಲಿರುವ ಭಾರತ “ಎ’ ತಂಡ ಶುಕ್ರವಾರದಿಂದ 4 ದಿನಗಳ ಅನಧಿಕೃತ ಟೆಸ್ಟ್‌ ಸರಣಿಯನ್ನು ಆರಂಭಿಸಲಿದೆ. ಆತಿಥೇಯ ನ್ಯೂಜಿಲ್ಯಾಂಡ್‌ “ಎ’ ವಿರುದ್ಧದ ಈ ಪಂದ್ಯ ಮೌಂಟ್‌ ಮೌಂಗನಿಯಲ್ಲಿ ನಡೆಯಲಿದೆ.

ಸರಣಿಯಲ್ಲಿ 3 ಟೆಸ್ಟ್‌ ಪಂದ್ಯಗಳ ಜತೆಗೆ 3 ಏಕದಿನ ಪಂದ್ಯಗಳನ್ನೂ ಆಡಲಾಗುವುದು. ಮುಂಬರುವ ಕಠಿನ ಆಸ್ಟ್ರೇಲಿಯ ಪ್ರವಾಸದ ಹಿನ್ನೆಲೆಯಲ್ಲಿ ಭಾರತದ ಆಟಗಾರರ ಪಾಲಿಗೆ ಇದೊಂದು ಅಭ್ಯಾಸ ಸರಣಿಯಾಗಲಿದೆ. ಭಾರತದ 5 ಮಂದಿ ಟೆಸ್ಟ್‌ ಆಟಗಾರರು “ಎ’ ತಂಡದಲ್ಲಿದ್ದಾರೆ. 

ಇಲ್ಲಿನ ವಾತಾವರಣ ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳಲು ಇದು ಸಹಕಾರಿಯಾಗಲಿದೆ. ಜತೆಗೆ “ಗೋಡೆ’ ಖ್ಯಾತಿಯ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಅವರ ಮಾರ್ಗದರ್ಶನವೂ ಇವರಿಗೆ ಲಭಿಸಲಿದೆ.

2 ತಂಡಗಳ ಪ್ರಯೋಗ
ಈ ಸರಣಿಗಾಗಿ ಭಾರತ 2 ಪ್ರತ್ಯೇಕ ತಂಡಗಳನ್ನು ರಚಿಸಿದ್ದು ವಿಶೇಷ. ಮೊದಲ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಭಾರತ “ಎ’ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದೆರಡು ಟೆಸ್ಟ್‌ ಪಂದ್ಯಗಳ ವೇಳೆ ಕರುಣ್‌ ನಾಯರ್‌ ನಾಯಕರಾಗಿರುತ್ತಾರೆ.

ಭಾರತೀಯ ಕ್ರಿಕೆಟಿನ ನವತಾರೆ ಪೃಥ್ವಿ ಶಾ ಮತ್ತು ಮುರಳಿ ವಿಜಯ್‌ ಇನ್ನಿಂಗ್ಸ್‌ ಆರಂಭಿಸಿದರೆ, ಕರ್ನಾಟಕದ ರನ್‌ಯಂತ್ರ ಮಾಯಾಂಕ್‌ ಅಗರ್ವಾಲ್‌ ವನ್‌ಡೌನ್‌ನಲ್ಲಿ ಬರಬಹುದು. ಮಧ್ಯಮ ಕ್ರಮಾಂಕಕ್ಕೆ ಕಪ್ತಾನ ಅಜಿಂಕ್ಯ ರಹಾನೆ, ಹನುಮ ವಿಹಾರಿ ಬಲ ತುಂಬಲಿದ್ದಾರೆ. ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ಪಾರ್ಥಿವ್‌ ಪಟೇಲ್‌ ಪಾಲಾಗಲಿದೆ. ಒಂದು ಆಲ್‌ರೌಂಡರ್‌ ಸ್ಥಾನಕ್ಕಾಗಿ ಕರ್ನಾಟಕದ ಕೆ. ಗೌತಮ್‌ ಮತ್ತು ತಮಿಳುನಾಡಿನ ವಿಜಯ್‌ ಶಂಕರ್‌ ನಡುವೆ ಸ್ಪರ್ಧೆ ಇದೆ. ರಜನೀಶ್‌ ಗುರ್ಬಾನಿ, ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್‌, ಶಾಬಾಜ್‌ ನದೀಂ ಸ್ಪೆಷಲಿಸ್ಟ್‌ ಬೌಲರ್‌ಗಳಾಗಿದ್ದಾರೆ.

ಆತಿಥೇಯ ನ್ಯೂಜಿಲ್ಯಾಂಡ್‌ ಆಟಗಾರರಿಗೂ ಇದೊಂದು ಮಹತ್ವದ ಸರಣಿ. ಅಗ್ರ ಕ್ರಮಾಂಕದ ಗ್ಲೆನ್‌ ಫಿಲಿಪ್ಸ್‌, 18ರ ಹರೆಯದ ರವೀಂದ್ರ ರಚಿತ, ಜಾರ್ಜ್‌ ವರ್ಕರ್‌ ಮೇಲೆ ಆಯ್ಕೆಗಾರರು ಹದ್ದಿನಗಣ್ಣಿರಿಸಿದ್ದಾರೆ.

ಸಂಭಾವ್ಯ ತಂಡಗಳು
ಭಾರತ “ಎ’:
ಪೃಥ್ವಿ ಶಾ, ಮುರಳಿ ವಿಜಯ್‌, ಮಾಯಾಂಕ್‌ ಅಗರ್ವಾಲ್‌, ಅಜಿಂಕ್ಯ ರಹಾನೆ (ನಾಯಕ), ಹನುಮ ವಿಹಾರಿ, ಪಾರ್ಥಿವ್‌ ಪಟೇಲ್‌ (ವಿ.ಕೀ.), ಕೃಷ್ಣಪ್ಪ ಗೌತಮ್‌/ವಿಜಯ್‌ ಶಂಕರ್‌, ಶಾಬಾಜ್‌ ನದೀಂ, ಮೊಹಮ್ಮದ್‌ ಸಿರಾಜ್‌, ನವದೀಪ್‌ ಸೈನಿ, ರಜನೀಶ್‌ ಗುರ್ಬಾನಿ.
ನ್ಯೂಜಿಲ್ಯಾಂಡ್‌ “ಎ’: ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ಜಾರ್ಜ್‌ ವರ್ಕರ್‌, ವಿಲ್‌ ಯಂಗ್‌, ಟಿಮ್‌ ಸೀಫ‌ರ್ಟ್‌, ಡೇನ್‌ ಕ್ಲೆವರ್‌, ಲಾಗನ್‌ ವಾನ್‌ ಬೀಕ್‌, ಡಗ್‌ ಬ್ರೇಸ್‌ವೆಲ್‌, ಕೈಲ್‌ ಜಾಮಿಸನ್‌, ಸೇತ್‌ ರ್ಯಾನ್ಸ್‌, ಸ್ಲಾಟ್‌ ಕ್ಯುಗೆಲೀನ್‌.
 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.