ಅಕ್ಷರ್ ಪಟೇಲ್ ದಂಪತಿಯಿಂದ ಶ್ರೀ ಮಹಾಕಾಳೇಶ್ವರನ ದರ್ಶನ
Team Udayavani, Feb 28, 2023, 5:40 AM IST
ಉಜ್ಜಯಿನಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಆಲ್ರೌಂಡರ್ ಅಕ್ಷರ್ ಪಟೇಲ್, ಪತ್ನಿ ಮೇಹಾ ಪಟೇಲ್ ಅವರೊಂದಿಗೆ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರನ ದರ್ಶನ ಪಡೆದರು.
ಇಬ್ಬರೂ ಸೋಮವಾರ ಬ್ರಾಹ್ಮಿ ಮುಹೂರ್ತದ ಭಸ್ಮ ಆರತಿಯಲ್ಲಿ ಪಾಲ್ಗೊಂಡರು. ದೇವಸ್ಥಾನದ ಗರ್ಭಗುಡಿಯಲ್ಲಿ ಜಲಾಭಿಷೇಕವನ್ನು ನೆರವೇರಿಸಿ, ಶಿವನ ಪ್ರಾರ್ಥನೆಯನ್ನೂ ಮಾಡಿದರು.