Para World Cup Shooting: ಭಾರತ ತಂಡಕ್ಕೆ ಬಂಗಾರ
Team Udayavani, Mar 13, 2024, 12:18 AM IST
ಹೊಸದಿಲ್ಲಿ: ಪ್ಯಾರಾ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತ 2ನೇ ಚಿನ್ನದ ಪದಕ ಜಯಿಸಿದೆ. ಮಂಗಳವಾರದ 10 ಮೀ. ಏರ್ ಪಿಸ್ತೂಲ್ ಸ್ಟಾಂಡರ್ಡ್ (ಎಸ್ಎಚ್1) ವಿಭಾಗದಲ್ಲಿ ಚಿನ್ನ ಒಲಿಯಿತು.
ದಕ್ಷಿಣ ಕೊರಿಯಾ ವಿರುದ್ಧದ ಫೈನಲ್ನಲ್ಲಿ ರುದ್ರಾಂಶ್ ಖಾಂಡೇಲ್ವಾಲ (364), ಆಕಾಶ್ (346) ಸಂದೀಪ್ ಕುಮಾರ್ (340) ಸೇರಿಕೊಂಡು ಒಟ್ಟು 1,050 ಅಂಕ ಗಳಿಸಿ ಬಂಗಾರ ಗೆದ್ದರು. ದ. ಕೊರಿಯಾ ಬೆಳ್ಳಿ (1,037), ಚೀನ ಕಂಚು (1,019) ಗೆದ್ದಿತು.
ಇದೇ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ರುದ್ರಾಂಶ್ ಬೆಳ್ಳಿಗೆ ತೃಪ್ತಿಪಟ್ಟರು. ಕೊರಿಯಾದ ಕಿಮ್ ಜುಂಗ್ನಾಮ್ ಮತ್ತು ರುದ್ರಾಂಶ್ ಸಮಾನ 364 ಅಂಕ ಗಳಿಸಿದರು. ಆದರೆ “ಇನ್ನರ್ ಟೆನ್ಸ್’ ಲೆಕ್ಕಾಚಾರದಲ್ಲಿ ಮುಂದಿದ್ದ ಕೊರಿಯಾದ ಶೂಟರ್ ಚಿನ್ನವನ್ನು ತಮ್ಮದಾಗಿಸಿಕೊಂಡರು. ಜುಂಗ್ನಾಮ್ 9, ರುದ್ರಾಂಶ್ ಕೇವಲ 2 ಸಲ ಈ ಗುರಿ ಮುಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು