ಆಸೀಸ್‌ವನಿತೆಯರಿಗೆ ಸೋಲುಣಿಸಿ ಮಿಥಾಲಿ ಪಡೆ ವಿಶ್ವಕಪ್‌ ಫೈನಲಿಗೆ ಲಗ್ಗೆ

Team Udayavani, Jul 21, 2017, 12:25 AM IST

Ind-Final-21-7.jpg

ಡರ್ಬಿ: ಭಾರತೀಯ ಮಹಿಳಾ ಕ್ರಿಕೆಟ್‌ ತಂಡವು ಆಂಗ್ಲರ ನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. 11ನೇ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಕೂಟದ ಎರಡನೇ ಸೆಮಿಫೈನಲ್‌ ಪಂದ್ಯಾಟದಲ್ಲಿ ಹಾಲಿ ಚಾಂಪಿಯನ್‌ ಆಗಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 36 ರನ್ನುಗಳಿಂದ ಸದೆಬಡಿಯುವ ಮೂಲಕ ಮಿಥಾಲಿ ರಾಜ್‌ ನೇತೃತ್ವದ ಭಾರತೀಯ ಮಹಿಳಾ ಪಡೆ ಎರಡನೇ ಬಾರಿಗೆ ವಿಶ್ವಕಪ್‌ ಫೈನಲಿಗೆ ಲಗ್ಗೆಯಿರಿಸಿದೆ.  

ಹರ್ಮಿನ್‌ ಪ್ರೀತ್‌ ಕೌರ್‌ (171) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನೊಂದಿಗೆ ಭಾರತವು 42 ಓವರುಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 281 ರನ್ನುಗಳ ಸವಾಲಿನ ಮೊತ್ತವನ್ನು ಪೇರಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸೀಸ್‌ ತಂಡವು ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವನ್ನು ಆಡುವಲ್ಲಿ ವಿಫ‌ಲಗೊಂಡಿತು. ಆಸೀಸ್‌ ಪಾಳಯದ ಆರಂಭಿಕ ಕ್ರಮಾಂಕದ ವೈಫ‌ಲ್ಯದಿಂದಾಗಿ ಮತ್ತು ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಯಿಂದಾಗಿ ಸವಾಲಿನ ಮೊತ್ತವನ್ನು ಬೆನ್ನಟ್ಟಲು ಆಸೀಸ್‌ ಆಟಗಾರ್ತಿಯರಿಗೆ ಸಾಧ್ಯವಾಗಲಿಲ್ಲ.

ಆಸೀಸ್‌ ಪಾಳಯದಲ್ಲಿ ಅಲೆಕ್ಸ್‌ ಬ್ಲ್ಯಾಕ್‌ವೆಲ್‌ ಅವರದ್ದು ಏಕಾಂಗಿ ಹೋರಾಟವಾಗಿತ್ತು. ಕೊನೆಯವರಾಗಿ ಔಟಾಗುವ ಮುನ್ನು ಈ ಆಟಗಾರ್ತಿ ಕೇವಲ 56 ಎಸೆತಗಳಲ್ಲಿ 90 ರನ್ನುಗಳನ್ನು ಬಾರಿಸಿ ಮಿಂಚಿದರು. ಉಳಿದಂತೆ ಇ.ಜೆ. ವಿಲಾನಿ (75), ಪೆರಿ (38), ಅವರಿಂದ ಮಾತ್ರವೇ ಎರಡಂಕೆಯ ಮೊತ್ತ ದಾಖಲಾಯಿತು.

ಆಸ್ಟ್ರೇಲಿಯಾ ವನಿತೆಯರು 40 ಓವರುಗಳಲ್ಲಿ 245 ರನ್ನುಗಳಿಗೆ ಆಲೌಟ್‌ ಆಗುವ ಮೂಲಕ ಸತತ ಎರಡನೇ ಬಾರಿಗೆ ಹಾಗೂ ದಾಖಲೆಯ ಏಳನೇ ಬಾರಿ ವಿಶ್ವಕಪ್‌ ಟ್ರೋಫಿ ಎತ್ತುವ ಕನಸು ನುಚ್ಚುನೂರಾಯಿತು.

ಅಂತಿಮವಾಗಿ ಆಸೀಸ್‌ ವಿರುದ್ಧ 36 ರನ್ನುಗಳ ಅಧಿಕಾರಯುತ ಜಯ ದಾಖಲಿಸಿದ ಭಾರತೀಯ ವನಿತೆಯರು 12 ವರ್ಷಗಳ ಬಳಿಕ ಈ ಪ್ರತಿಷ್ಠಿತ ಕೂಟದ ಫೈನಲಿಗೇರಿದ ಸಾಧನೆ ಮಾಡಿದರು. ಭಾರತವು ಫೈನಲಿನಲ್ಲಿ ಮೂರು ಬಾರಿಯ ವಿಶ್ವಕಪ್‌ ಚಾಂಪಿಯನ್‌ ಹಾಗೂ ಅತಿಥೇಯ ಇಂಗ್ಲಂಡ್‌ ತಂಡದ ಸವಾಲನ್ನು ಎದುರಿಸಲಿದೆ. ಶಿಸ್ತುಬದ್ಧ ದಾಳಿ ನಡೆಸಿದ ಭಾರತೀಯ ಆಟಗಾರ್ತಿಯರಲ್ಲಿ  ದೀಪ್ತಿ ಶರ್ಮಾ 3 ವಿಕೆಟ್‌ ಪಡೆದು ಮಿಂಚಿದರೆ, ಗೋಸ್ವಾಮಿ, ಲೆಗ್‌ ಸ್ಪಿನ್ನರ್‌ ಶಿಖಾ ಪಾಂಡೆ ತಲಾ ಎರಡು ವಿಕೆಟ್‌ ಪಡೆದರು.

ಟಾಪ್ ನ್ಯೂಸ್

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

nosthush-kenjige

T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್‌ ಕೆಂಜಿಗೆಗೆ ಸ್ಥಾನ

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

nosthush-kenjige

T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್‌ ಕೆಂಜಿಗೆಗೆ ಸ್ಥಾನ

Kohli IPL 2024

IPL;ಇಂದು ಆರ್‌ಸಿಬಿ ಎದುರಾಳಿ ಗುಜರಾತ್‌ ಟೈಟಾನ್ಸ್‌:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ

1-qewqeqwe

England;  20 ವರ್ಷದ ಕ್ರಿಕೆಟಿಗ ನಿಗೂಢ ಸಾವು!

1-weweqwe

IPL; ವಾಂಖೇಡೆಯಲ್ಲಿ ಬೌಲರ್‌ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

ಅರವಿಂದ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು

ಅರವಿಂದ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.