ಮಹಿಳಾ ಕುಸ್ತಿ ಕೋಚ್ ಅಮೆರಿಕಕ್ಕೆ ವಾಪಸ್
Team Udayavani, Mar 21, 2020, 9:30 AM IST
ಹೊಸದಿಲ್ಲಿ: ಭಾರತದ ಮಹಿಳಾ ಕುಸ್ತಿ ತಂಡದ ವಿದೇಶಿ ಕೋಚ್ ಆ್ಯಂಡ್ರೂ ಕುಕ್ ಅಮೆರಿಕಕ್ಕೆ ವಾಪಸಾಗಿದ್ದಾರೆ. ಕೋವಿಡ್-19 ಕಾರಣದಿಂದ ಲಕ್ನೋ ಮತ್ತು ಸೋನೆಪತ್ನಲ್ಲಿ ನಡೆಯಬೇಕಿದ್ದ ಶಿಬಿರಗಳನ್ನು ರಾಷ್ಟ್ರೀಯ ಒಕ್ಕೂಟ ರದ್ದುಗೊಳಿಸಿತ್ತು. ಹೀಗಾಗಿ ಕುಕ್ ತವರಿಗೆ ಮರಳಿದರು. ಭಾರತೀಯ ತರಬೇತುದಾರ ಕುಲದೀಪ್ ಮಲಿಕ್ ಅನಾರೋಗ್ಯದಿಂದಾಗಿ ಹರ್ಯಾಣಕ್ಕೆ ವಾಪಸಾದರು.
ಆ್ಯಂಡ್ರೂ ಕುಕ್ ಲಕ್ನೋದ ಸಾಯ್ ಸೆಂಟರ್ನಲ್ಲಿ ಭಾರತದ ವನಿತಾ ತಂಡದ ಜತೆಗಿದ್ದರು. ಆದರೆ ಇಲ್ಲಿ 4-5 ಮಂದಿಯಷ್ಟೇ ವನಿತಾ ಕುಸ್ತಿಪಟುಗಳಿದ್ದರು. ಕೋವಿಡ್-19 ಭೀತಿಯಿಂದ ಹೋಳಿ ಬಳಿಕ ಯಾರೂ ಸಾಯ್ ಕೇಂದ್ರಕ್ಕೆ ಆಗಮಿಸಿರಲಿಲ್ಲ.