Boxing: ಒಲಿಂಪಿಕ್ಸ್ ಅರ್ಹತೆ ತಪ್ಪಿಸಿಕೊಂಡ ನಿಶಾಂತ್ ದೇವ್
Team Udayavani, Mar 12, 2024, 11:50 PM IST
ಬುಸ್ಟೊ ಅರ್ಸಿಜಿಯೊ (ಇಟಲಿ): ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಕೂಟದ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ನಿಶಾಂತ್ ದೇವ್ ಪರಾಭವಗೊಂಡಿದ್ದಾರೆ.
71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಅಮೆರಿಕದ ಒಮರಿ ಜೋನ್ಸ್ ವಿರುದ್ಧ ಅವರು 1-4 ಅಂಕಗಳಿಂದ ಸೋಲುವುದರೊಂದಿಗೆ, ಕೂದಲೆಳೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು.