INDvsAFG: ಟಾಸ್ ಗೆದ್ದ ಭಾರತ; ಸ್ಯಾಮ್ಸನ್, ಆವೇಶ್, ಕುಲದೀಪ್ ಗೆ ಸಿಗದ ಅವಕಾಶ
Team Udayavani, Jan 11, 2024, 6:49 PM IST
ಮೊಹಾಲಿ: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯವು ಮೊಹಾಲಿಯಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿದೆ.
ನಾಯಕ ರೋಹಿತ್ ಶರ್ಮಾ ಅವರು 14 ತಿಂಗಳ ಬಳಿಕ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡುತ್ತಿದ್ದಾರೆ. ರೋಹಿತ್ ಅವರೊಂದಿಗೆ ಆರಂಭಿಕರಾಗಿ ಗಿಲ್ ಆಡಲಿದ್ದಾರೆ. ಜೈಸ್ವಾಲ್ ಅವರು ಆರಂಭ ಮಾಡಲಿದ್ದಾರೆಂದು ಬುಧವಾರ ಕೋಚ್ ದ್ರಾವಿಡ್ ಹೇಳಿದ್ದರು, ಆದರೆ ಅನಾರೋಗ್ಯದ ಕಾರಣದಿಂದ ಜೈಸ್ವಾಲ್ ಇಂದು ಆಡುತ್ತಿಲ್ಲ.
ಜಿತೇಶ್ ಶರ್ಮಾ ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗಿದೆ. ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿಲ್ಲ. ಆವೇಶ್ ಖಾನ್, ಕುಲದೀಪ್ ಯಾದವ್ ಅವರೂ ಸ್ಥಾನ ಪಡೆದಿಲ್ಲ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿ.ಕೀ), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಝದ್ರಾನ್ (ನಾ), ರಹಮತ್ ಷಾ, ಅಜ್ಮತುಲ್ಲಾ ಒಮರ್ ಝೈ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್.