ಐಪಿಎಲ್‌-2020 : ಮುಂಬಯಿಯಲ್ಲಿ ಆರಂಭ; ಮುಂಬಯಿಯಲ್ಲೇ ಫೈನಲ್‌

Team Udayavani, Jan 28, 2020, 6:40 AM IST

ಹೊಸದಿಲ್ಲಿ: ಮುಂಬರುವ ಐಪಿಎಲ್‌ ಪಂದ್ಯಾವಳಿ ಮುಂಬಯಿಯಲ್ಲಿ ಆರಂಭವಾಗಿ ಅಲ್ಲಿಯೇ ಫೈನಲ್‌ ಕಾಣಲಿದೆ. ಮಾರ್ಚ್‌ 29ರಂದು ವಾಂಖೇಡೆಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ-ಚೆನ್ನೈ ಸೆಣಸಲಿವೆ. ಪ್ರಶಸ್ತಿ ಹಣಾಹಣಿ ಮೇ 24ರಂದು ನಡೆಯಲಿದೆ.

ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇದೇ ವೇಳೆ ರಾತ್ರಿ ಪಂದ್ಯವನ್ನು 7.30ಕ್ಕೆ ಆರಂಭಿಸುವ ಪ್ರಸ್ತಾವವನ್ನು ಕೈಬಿಡಲಾಯಿತು. ಹಿಂದಿನಂತೆ ರಾತ್ರಿ 8 ಗಂಟೆಗೇ ಪಂದ್ಯ ಆರಂಭವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದರು.

ಇದೇ ಮೊದಲ ಸಲ ಮೂರನೇ ಅಂಪಾಯರ್‌ಗೆ ನೋ ಬಾಲ್‌ ನೀಡಲು ಅವಕಾಶ ಕೊಡಲಾಗುತ್ತಿದೆ. ಹಾಗೆಯೇ ಬ್ಯಾಟ್ಸ್‌ಮನ್‌ ಬ್ಯಾಟಿಂಗ್‌ ನಡೆಸುತ್ತಿದ್ದಾಗ ಗಾಯಗೊಂಡರೆ ಬದಲಿ ಆಟಗಾರನನ್ನು ಕಣಕ್ಕಿಳಿಸಲಾಗುವುದು ಎಂದು ಸೌರವ್‌ ಗಂಗೂಲಿ ತಿಳಿಸಿದರು.

ಐಪಿಎಲ್‌ ಆರಂಭಕ್ಕೂ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಲ್ಗೊಳ್ಳುವ ಆಲ್‌ಸ್ಟಾರ್ ಕ್ರಿಕೆಟ್‌ ಕೂಟವನ್ನು ಆಯೋಜಿಸಲಾಗುತ್ತಿದೆ. ಅಹ್ಮದಾಬಾದ್‌ನಲ್ಲಿ ಈ ಕೂಟವನ್ನು ನಡೆಸಬೇಕಿತ್ತು. ಆದರೆ ಅಲ್ಲಿನ ಕ್ರೀಡಾಂಗಣ ಇನ್ನೂ ಸಿದ್ಧವಾಗಿಲ್ಲದ ಕಾರಣ ಇದನ್ನು ಎಲ್ಲಿ ಆಯೋಜಿಸುವುದು ಎನ್ನುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಗಂಗೂಲಿ ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ