Udayavni Special

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್


Team Udayavani, Sep 21, 2020, 9:54 PM IST

ಸಿಕ್ಕ ಮೊದಲ ಅವಕಾಶದಲ್ಲೇ ಅರ್ಧ ಶತಕ ಬಾರಿಸಿದ ಪಡಿಕ್ಕಲ್

ದುಬಾೖ: ಕರ್ನಾಟಕದ ಪ್ರತಿಭಾನ್ವಿತ ಆಟಗಾರ ದೇವದತ್ತ ಪಡಿಕ್ಕಲ್‌ ಮೊದಲ ಐಪಿಎಲ್‌ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ತಮ್ಮ ಆರಂಭವನ್ನು ಸ್ಮರಣೀಯಗೊಳಿಸಿದರು. ಅವರ ಅರ್ಧ ಶತಕ 36 ಎಸೆತಗಳಿಂದ ಬಂತು. ಪಡಿಕ್ಕಲ್‌ ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಹೊಡೆದ ಆರ್‌ಸಿಬಿಯ 5ನೇ ಕ್ರಿಕೆಟಿಗ. ಉಳಿದವರೆಂದರೆ ಕ್ರಿಸ್‌ ಗೇಲ್‌ (ಅಜೇಯ 102), ಎಬಿ ಡಿ ವಿಲಿಯರ್ (ಅಜೇಯ 54), ಯುವರಾಜ್‌ ಸಿಂಗ್‌ (ಅಜೇಯ 52) ಮತ್ತು ಶ್ರೀವತ್ಸ ಗೋಸ್ವಾಮಿ (52).

ಐಪಿಲ್ ಮೂರನೇ ಪಂದ್ಯದಲ್ಲಿ ಆರ್‌ಸಿಬಿ, ಸನ್‌ರೈಸರ್ ಹೈದರಾಬಾದ್‌ ಗೆಲುವಿವೆ 16೪ ರನ್ ಗಾಲ ಗುರಿ ನೀಡಿದೆ. ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್‌, ಆಸ್ಟ್ರೇಲಿಯದ ಬಿಗ್‌ ಹಿಟ್ಟರ್‌ ಆರನ್‌ ಫಿಂಚ್‌ ಮತ್ತು “360 ಡಿಗ್ರಿ ಬ್ಯಾಟ್ಸ್‌ಮನ್‌’ ಎಬಿ ಡಿ ವಿಲಿಯರ್ ಅವರ ಹೊಡಿಬಡಿ ಬ್ಯಾಟಿಂಗ್‌ ಪರಾಕ್ರಮದಿಂದ 163 ರನ್‌ ಪೇರಿಸಿದೆ. ಪಡಿಕ್ಕಲ್‌ ಚೊಚ್ಚಲ ಐಪಿಎಲ್‌ನಲ್ಲೇ ಅರ್ಧ ಶತಕ ಬಾರಿಸಿ ಮಿಂಚಿದರು.

ಪಡಿಕ್ಕಲ್‌ ಮತ್ತು ಮೊದಲ ಸಲ ಬೆಂಗಳೂರು ಫ್ರಾಂಚೈಸಿಯನ್ನು ಪ್ರತಿನಿಧಿಸಿದ ಆರನ್‌ ಫಿಂಚ್‌ ಆರ್‌ಸಿಬಿಗೆ ಭರ್ಜರಿ ಆರಂಭ ನೀಡಿದರು. 5.2 ಓವರ್‌ಗಳಲ್ಲಿ 50 ರನ್‌ ಜತೆಯಾಟ ನೀಡುವ ಮೂಲಕ ಉತ್ತಮ ಅಡಿಪಾಯವೊಂದನ್ನು ನಿರ್ಮಿಸಿದರು. 9 ಓವರ್‌ಗಳಲ್ಲಿ 75 ರನ್‌ ಒಟ್ಟುಗೂಡಿತು. ಇವರಲ್ಲಿ ಫಿಂಚ್‌ಗಿಂತ ಲಂಬೂ ಬ್ಯಾಟ್ಸ್‌ಮನ್‌ ಪಡಿಕ್ಕಲ್‌ ಬ್ಯಾಟಿಂಗ್‌ ಬಿರುಸಿನಿಂದ ಕೂಡಿತ್ತು. ಬಿರುಸಿನ ಆಟಕ್ಕಿಳಿದ ಅವರು ಆಕರ್ಷಕ ಬೌಂಡರಿಗಳ ಮೂಲಕ ಗಮನ ಸೆಳೆದರು.

ಹೈದರಾಬಾದ್‌ನ ಪ್ರಧಾನ ಸ್ಪಿನ್ನರ್‌ ರಶೀದ್‌ ಖಾನ್‌ ಕೂಡ ಆರಂಭಿಕರ ಆರ್ಭಟದ ವೇಳೆ ಪರಿಣಾಮ ಬೀರಲಿಲ್ಲ. ಇವರನ್ನು ಫಿಂಚ್‌ ಟಾರ್ಗೆಟ್‌ ಮಾಡಿಕೊಂಡರು. ಅಫ್ಘಾನ್‌ ಬೌಲರ್‌ಗೆ ಸಿಕ್ಸರ್‌ ರುಚಿಯನ್ನೂ ತೋರಿಸಿದರು. 10 ಓವರ್‌ ಆಗುವಷ್ಟರಲ್ಲಿ 7 ಮಂದಿಯನ್ನು ಬೌಲಿಂಗಿಗೆ ಇಳಿಸಿದ್ದು ಹೈದರಾಬಾದ್‌ನ ಅಸಹಾಯಕತೆಗೆ, ಆರ್‌ಸಿಬಿ ಆರಂಭಿಕರ ಪಾರಮ್ಯಕ್ಕೆ ಸಾಕ್ಷಿಯಾಯಿತು.

ಪಡಿಕ್ಕಲ್‌ ಫಿಂಚ್‌ ಜತೆಯಾಟ ಭರ್ತಿ 11 ಓವರ್‌ಗಳ ತನಕ ಸಾಗಿತು. ಮೊದಲ ವಿಕೆಟಿಗೆ 90 ರನ್‌ ಒಟ್ಟುಗೂಡಿತು. ಆಗ 56 ರನ್‌ ಮಾಡಿದ ಪಡಿಕ್ಕಲ್‌ ಅವರನ್ನು ವಿಜಯ್‌ ಶಂಕರ್‌ಗೆ ಬೌಲ್ಡ್‌ ಮಾಡಿದರು. 42 ಎಸೆತಗಳ ಈ ಆಕರ್ಷಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಒಳಗೊಂಡಿತ್ತು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Fish

ಜೆಲ್ಲಿ ಮೀನು ಹಾವಳಿ: ಮತ್ತೆ ಮೀನುಗಾರಿಕೆಗೆ ಹೊಡೆತ

ಮುಗಿಯಿತು ಸ್ವಾಭಿಮಾನಿ ವಿದ್ಯಾರ್ಥಿಯ “ಕೂಲಿ ಬದುಕು’

ಮುಗಿಯಿತು ಸ್ವಾಭಿಮಾನಿ ವಿದ್ಯಾರ್ಥಿಯ “ಕೂಲಿ ಬದುಕು’

ಅಣೆಕಟ್ಟು ನಿರ್ವಹಣೆಗೆ 10 ಸಾವಿರ ಕೋಟಿ

ಅಣೆಕಟ್ಟು ನಿರ್ವಹಣೆಗೆ 10 ಸಾವಿರ ಕೋಟಿ

ಟ್ರಂಪ್‌ಗೆ ದೊಡ್ಡ ಸವಾಲೊಡ್ಡುತ್ತಿರುವ ಜೋ ಬೈಡೆನ್‌

ಟ್ರಂಪ್‌ಗೆ ದೊಡ್ಡ ಸವಾಲೊಡ್ಡುತ್ತಿರುವ ಜೋ ಬೈಡೆನ್‌

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

IPL

IPL 2020 : ಕೊಲ್ಕತ್ತಾ – ಚೆನ್ನೈ ಮುಖಾಮುಖಿ : ಕೆಕೆಆರ್‌ಗೆ ಕಂಟಕವಾಗಿ ಪರಿಣಮಿಸಿದ ಚೆನ್ನೈ

ಅಡಿಗಡಿಗೂ ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?: ಕುಸುಮಾ

ಅಡಿಗಡಿಗೂ ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?: ಕುಸುಮಾ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Football

ಕೆಎಸ್‌ಎ ಫುಟ್ಬಾಲ್‌ ಆಟಗಾರ ಮೈದಾನದಲ್ಲೇ ಸಾವು

ಆಸೀಸ್‌ ತಂಡಕ್ಕೆ ಆಲ್‌ರೌಂಡರ್‌ ಗ್ರೀನ್‌ ಸೇರ್ಪಡೆ

ಆಸೀಸ್‌ ತಂಡಕ್ಕೆ ಆಲ್‌ರೌಂಡರ್‌ ಗ್ರೀನ್‌ ಸೇರ್ಪಡೆ

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

IPL

IPL 2020 : ಕೊಲ್ಕತ್ತಾ – ಚೆನ್ನೈ ಮುಖಾಮುಖಿ : ಕೆಕೆಆರ್‌ಗೆ ಕಂಟಕವಾಗಿ ಪರಿಣಮಿಸಿದ ಚೆನ್ನೈ

chennai

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ KKR: ಟಾಸ್ ಗೆದ್ದ ಧೋನಿ ಪಡೆ

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

Football

ಕೆಎಸ್‌ಎ ಫುಟ್ಬಾಲ್‌ ಆಟಗಾರ ಮೈದಾನದಲ್ಲೇ ಸಾವು

ಆಯುರ್‌ ರಕ್ಷಾದಿಂದ ಕೋವಿಡ್ ಸೋಂಕು ತಡೆ ಸಾಧ್ಯ: ಡಾ| ಸಂತೋಷ್‌ ಗುರೂಜಿ

ಆಯುರ್‌ ರಕ್ಷಾದಿಂದ ಕೋವಿಡ್ ಸೋಂಕು ತಡೆ ಸಾಧ್ಯ: ಡಾ| ಸಂತೋಷ್‌ ಗುರೂಜಿ

Fish

ಜೆಲ್ಲಿ ಮೀನು ಹಾವಳಿ: ಮತ್ತೆ ಮೀನುಗಾರಿಕೆಗೆ ಹೊಡೆತ

UDUPIಉಡುಪಿ ನಗರಸಭೆ; ಸುಮಿತ್ರಾ ನಾಯಕ್‌ ಅಧ್ಯಕ್ಷೆ , ಲಕ್ಷ್ಮೀ ಉಪಾಧ್ಯಕ್ಷೆಯಾಗಿ ಆಯ್ಕೆ

ಉಡುಪಿ ನಗರಸಭೆ; ಸುಮಿತ್ರಾ ನಾಯಕ್‌ ಅಧ್ಯಕ್ಷೆ , ಲಕ್ಷ್ಮೀ ಉಪಾಧ್ಯಕ್ಷೆಯಾಗಿ ಆಯ್ಕೆ

ಮುಗಿಯಿತು ಸ್ವಾಭಿಮಾನಿ ವಿದ್ಯಾರ್ಥಿಯ “ಕೂಲಿ ಬದುಕು’

ಮುಗಿಯಿತು ಸ್ವಾಭಿಮಾನಿ ವಿದ್ಯಾರ್ಥಿಯ “ಕೂಲಿ ಬದುಕು’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.