IPL; RCB ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಗೆ 7 ವಿಕೆಟ್ಗಳ ಜಯ
Team Udayavani, Mar 29, 2024, 10:56 PM IST
ಬೆಂಗಳೂರು : ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಎದುರು ಕೋಲ್ಕತಾ ನೈಟ್ ರೈಡರ್ಸ್ 7 ವಿಕೆಟ್ಗಳ ಜಯ ಸಾಧಿಸಿದೆ.
ಕೋಲ್ಕತಾ ನೈಟ್ ರೈಡರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ ಸಿಬಿ 6ಅರ ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಅಮೋಘ ಆಟವಾಡಿದ ವಿರಾಟ್ ಕೊಹ್ಲಿ59 ಎಸೆತಗಳಲ್ಲಿ 83 ರನ್ ಗಳಿಸಿ ಔಟಾಗದೆ ಉಳಿದರು. ಗ್ರೀನ್ 33, ಮ್ಯಾಕ್ಸ್ ವೆಲ್ 28, ದಿನೇಶ್ ಕಾರ್ತಿಕ್ 28 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಕೆಕೆಆರ್ 16.5 ಓವರ್ ಗಳಲ್ಲೇ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಅಮೋಘ ಜಯ ತನ್ನದಾಗಿಸಿಕೊಂಡಿತು. ಫಿಲಿಪ್ ಸಾಲ್ಟ್ 30, ಸುನಿಲ್ ನರೈನ್ 47(22ಎಸೆತ), ವೆಂಕಟೇಶ್ ಅಯ್ಯರ್ 50(30ಎಸೆತ), ಶ್ರೇಯಸ್ ಅಯ್ಯರ್ ಔಟಾಗದೆ 39, ರಿಂಕು ಸಿಂಗ್ ಔಟಾಗದೆ 5 ರನ್ ಗಳಿಸಿದರು.