ತಮಿಳು ಚಿತ್ರದಲ್ಲಿ ನಟಿಸಲಿರುವ ಇರ್ಫಾನ್: ಈ ಹೀರೋಗೆ ಪಠಾಣ್ ಎದುರಾಳಿ

Team Udayavani, Oct 15, 2019, 11:58 AM IST

ಮುಂಬೈ: ಟೀಂ ಇಂಡಿಯಾದಲ್ಲಿ ತಮ್ಮ ಸ್ವಿಂಗ್ ನಿಂದ ಗಮನ ಸೆಳೆದಿದ್ದ ವೇಗಿ ಇರ್ಫಾನ್ ಪಠಾಣ್ ಈಗ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಮೂಲತಃ ಗುಜರಾತ್ ರಾಜ್ಯದವರಾದ ಇರ್ಫಾನ್ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ದಕ್ಷಿಣ ಭಾರತದ ಚಿತ್ರದಲ್ಲಿ.

ಖ್ಯಾತ ನಿರ್ದೇಶಕ ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಲಿರುವ ತಮಿಳು ಚಿತ್ರದಲ್ಲಿ ಇರ್ಫಾನ್ ಪಠಾಣ್ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ. ಅಂದ ಹಾಗೆ ಪಠಾಣ್ ಯಾವ ಹೀರೋ ಎದುರು ನಟನೆ ಮಾಡಲಿದ್ದಾರೆ ಗೊತ್ತಾ?

ತಮಿಳು ಚಿತ್ರರಂಗದ ಸ್ಟಾರ್ ನಟ ಚಿಯಾನ್ ವಿಕ್ರಮ್ ಎದುರು ಇರ್ಫಾನ್ ಪಠಾಣ್ ತೆರೆ ಹಂಚಲಿದ್ದಾರೆ.

ಇರ್ಫಾನ್ ಪಠಾಣ್ ತನ್ನ ಟ್ವೀಟರ್ ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಹೊಸ ಪ್ರಯತ್ನ, ಹೊಸ ಸವಾಲುಗಳನ್ನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ