ಕುಸ್ತಿ ನಿರೀಕ್ಷೆಗಳು ಜಾಸ್ತಿ


Team Udayavani, Aug 19, 2018, 10:22 AM IST

pti8172018000236b.jpg

ಜಕಾರ್ತಾ: ರವಿವಾರದಿಂದಲೇ ಆರಂಭವಾಗಲಿರುವ ಏಶ್ಯಾಡ್‌ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಮೇಲೆ ವಿಪರೀತ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. 

ಪುರುಷರ ಫ್ರೀಸ್ಟೈಲ್‌ ಕುಸ್ತಿಯ 6 “ಜಟ್ಟಿ’ಗಳಲ್ಲಿ ಐವರು ರವಿವಾರ ಅದೃಷ್ಟ ಪರೀಕ್ಷೆಗೆ ಇಳಿಯಲಿರುವುದು ವಿಶೇಷ. ಕಾಮನ್ವೆಲ್ತ್‌ ಬಂಗಾರ ವಿಜೇತ ಭಜರಂಗ್‌ ಪೂನಿಯ (65 ಕೆಜಿ) ಉಜ್ಬೆಕಿಸ್ಥಾನದ ಸಿರೋಜಿದ್ದಿನ್‌ ಕಸನೋವ್‌ ವಿರುದ್ಧ ಸೆಣಸುವುದರೊಂದಿಗೆ ಭಾರತದ ಹೋರಾಟ ಮೊದಲ್ಗೊಳ್ಳಲಿದೆ. ಸತತ 3 ಚಿನ್ನದ ಪದಕಗಳ ಸಾಧನೆಯೊಂದಿಗೆ ಭಜರಂಗ್‌ ಏಶ್ಯಾಡ್‌ ಅಖಾಡಕ್ಕೆ  ಧುಮುಕಲಿದ್ದಾರೆ. ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌, ಜಾರ್ಜಿಯಾದಲ್ಲಿ ನಡೆದ ಟಿಬಿಸಿಲಿ ಗ್ರ್ಯಾನ್‌ಪ್ರಿ ಹಾಗೂ ಇಸ್ತಾನ್‌ಬುಲ್‌ನಲ್ಲಿ ಜರಗಿದ ಯಾಸರ್‌ ಡೋಗು ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಜರಂಗ್‌ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು.

ಒಲಿಂಪಿಕ್ಸ್‌ನಲ್ಲಿ 2 ವೈಯಕ್ತಿಕ ಪದಕ ಗೆದ್ದ ಭಾರತದ ಏಕೈಕ ಕ್ರೀಡಾಳಾಗಿರುವ ಸುಶೀಲ್‌ ಕುಮಾರ್‌, ಟಿಬಿಸಿಲಿ ಗ್ರ್ಯಾನ್‌ಪ್ರಿ ಕೂಟದ ಮೊದಲ ಸುತ್ತಿನಲ್ಲೇ ಸೋತರೂ ತುಂಬು ಆತ್ಮವಿಶ್ವಾಸದಲ್ಲಿದ್ದಾರೆ. ಇದು ಕಳೆದ 4 ವರ್ಷ ಗಳಲ್ಲಿ ಸುಶೀಲ್‌ ಅನುಭವಿಸಿದ ಏಕೈಕ ಸೋಲಾಗಿದೆ. ಇವರ ಮೊದಲ ಸುತ್ತಿನ ಎದು ರಾಳಿ ಬಹ್ರೈನಿನ ಅದಾಮ್‌ ಬಟಿರೋವ್‌.

ಒಲಿಂಪಿಕ್ಸ್‌ನಷ್ಟೇ ಕಠಿನ ಸ್ಪರ್ಧೆ
ಇದು ಒಲಿಂಪಿಕ್ಸ್‌ನಷ್ಟೇ ಕಠಿನ ಸ್ಪರ್ಧೆ ಎಂಬುದಾಗಿ ಭಾರತದ ಕುಸ್ತಿ ಕೋಚ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಒಲಿಂಪಿಕ್ಸ್‌ ಕುಸ್ತಿಯಲ್ಲೂ ಏಶ್ಯನ್ನರದೇ ಪ್ರಾಬಲ್ಯ ಇರುವುದರಿಂದ ಇದು ಏಶ್ಯನ್‌ ಗೇಮ್ಸ್‌ನಲ್ಲೂ ಪುನರಾವರ್ತನೆಗೊಳ್ಳುತ್ತದೆ ಎಂಬುದು ಫ್ರೀಸ್ಟೈಲ್‌ ನ್ಯಾಶನಲ್‌ ಕೋಚ್‌ ಜಗ¾ಂದರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಅಷ್ಟೂ ಜಪಾನೀ ವನಿತಾ ಕುಸ್ತಿಪಟುಗಳು ಏಶ್ಯಾಡ್‌ನ‌ಲ್ಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ಗ್ರೀಕೊ ರೋಮನ್‌ ವಿಭಾಗದಲ್ಲಿ ಸುಲಭ ಡ್ರಾ ಪಡೆದಿರುವ ಹರ್‌ಪ್ರೀತ್‌ ಸಿಂಗ್‌ (87 ಕೆಜಿ) ಪದಕದ ದೊಡ್ಡ ಭರವಸೆಯಾಗಿದ್ದಾರೆ ಎಂಬುದು ಕೋಚ್‌ ಕುಲದೀಪ್‌ ಸಿಂಗ್‌ ಅನಿಸಿಕೆ. 2014ರ ಏಶ್ಯಾಡ್‌ನ‌ಲ್ಲಿ ರಜತ ಪದಕ ಗೆದ್ದ ಭಜರಂಗ್‌ ಪೂನಿಯ ಮೇಲೂ ಕುಲದೀಪ್‌ ವಿಶ್ವಾಸ ಹೊಂದಿದ್ದಾರೆ.  ಜಪಾನ್‌ ಮತ್ತು ಇರಾನ್‌ ಬಲಿಷ್ಠ ಸ್ಪರ್ಧಿಗಳನ್ನು ಹೊಂದಿದ್ದರೂ ಇವರು ಇನ್ನೊಂದು ವಿಭಾಗ ದಲ್ಲಿದ್ದಾರೆ. ಕಳೆದ ಏಶ್ಯಾಡ್‌ನ‌ಲ್ಲಿ ಭಾರತ 5 ಕುಸ್ತಿ ಪದಕಗಳನ್ನು ಗೆದ್ದಿತ್ತು. ಚಿನ್ನ ಜಯಿಸಿದ್ದ ಏಕೈಕ ಸಾಧಕನೆಂದರೆ ಯೋಗೇಶ್ವರ್‌ ದತ್‌. ಪುರುಷರ ಗ್ರೀಕೊ ರೋಮನ್‌, ವನಿತಾ ಸ್ಪರ್ಧೆಗಳು ಸೋಮವಾರದಿಂದ ಆರಂಭವಾಗಲಿವೆ. 

ಪದಕ ಹೆಚ್ಚಳ
ಈ ಏಶ್ಯಾಡ್‌ನ‌ಲ್ಲಿ ಭಾರತದ ಕುಸ್ತಿ ಪದಕಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದನ್ನು ಕಾಣಬಹುದು.
-ಕೋಚ್‌

ಟಾಪ್ ನ್ಯೂಸ್

1-sadasdsad

G7 Summit; ಮೆಲೋನಿ-ಬ್ರಿಟನ್‌ ಪಿಎಂ ಸುನಕ್‌ ಆಲಿಂಗನಕ್ಕೆ ನೆಟ್ಟಿಗರಿಂದ ಭಾರೀ ವ್ಯಂಗ್ಯ

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

Nirmala 2 a

Union Budget ಜುಲೈ 22ಕ್ಕೆ ಮಂಡನೆ ಸಾಧ್ಯತೆ: ಸಿದ್ಧತೆ ಆರಂಭ

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

1-a-sasa

ಬಿಲ್ಗಾರಿಕೆ: ಉಕ್ರೇನ್‌ ಎದುರು ಭಾರತಕ್ಕೆ 3-5 ಸೋಲು

1-dsadsadsa

Paris Olympics ಕಾರಣ ವಿಂಬಲ್ಡನ್‌ಗೆ ನಡಾಲ್‌ ಗೈರು

two team India players will return home after the match against Canada

Team India; ಕೆನಡಾ ವಿರುದ್ದದ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ ಇಬ್ಬರು ಆಟಗಾರರು

BANvsNED; ಅರ್ಧಶತಕದ ಬೆನ್ನಲ್ಲೇ ‘ಸೆಹ್ವಾಗ್ ಯಾರು…?’ ಎಂದು ಪ್ರಶ್ನಿಸಿದ ಶಕೀಬ್ ಅಲ್ ಹಸನ್

BANvsNED; ಅರ್ಧಶತಕದ ಬೆನ್ನಲ್ಲೇ ‘ಸೆಹ್ವಾಗ್ ಯಾರು…?’ ಎಂದು ಪ್ರಶ್ನಿಸಿದ ಶಕೀಬ್ ಅಲ್ ಹಸನ್

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

1-sadasdsad

G7 Summit; ಮೆಲೋನಿ-ಬ್ರಿಟನ್‌ ಪಿಎಂ ಸುನಕ್‌ ಆಲಿಂಗನಕ್ಕೆ ನೆಟ್ಟಿಗರಿಂದ ಭಾರೀ ವ್ಯಂಗ್ಯ

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

Nirmala 2 a

Union Budget ಜುಲೈ 22ಕ್ಕೆ ಮಂಡನೆ ಸಾಧ್ಯತೆ: ಸಿದ್ಧತೆ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.