ಆಸೀಸ್ ವೇಗಿ ಜೇಮ್ಸ್ ಪ್ಯಾಟಿನ್ಸನ್ ಸಸ್ಪೆಂಡ್: ಪಾಕ್ ವಿರುದ್ಧದ ಪಂದ್ಯಕ್ಕೆ ಅಲಭ್ಯ

Team Udayavani, Nov 17, 2019, 10:00 AM IST

ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅವರಿಗೆ ಒಂದು ಪಂದ್ಯದ ನಿಷೇಧ ಶಿಕ್ಷೆ ನೀಡಲಾಗಿದೆ. ಹೀಗಾಗಿ ಪಾಕಿಸ್ಥಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ಯಾಟಿನ್ಸನ್ ಅಲಭ್ಯರಾಗಲಿದ್ದಾರೆ.

ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಶೇಫಿಫೀಲ್ಡ್ ಶೀಲ್ಡ್ ಕೂಟದ ವಿಕ್ಟೋರಿಯಾ ವಿರುದ್ಧದ ಪಂದ್ಯದಲ್ಲಿ ಪ್ಯಾಟಿನ್ಸನ್ ಅವರು ಕ್ರಿಕೆಟ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣ ಒಂದು ಪಂದ್ಯ ನಿಷೇಧ ಮಾಡಲಾಗಿದೆ.

ಪಂದ್ಯದ ವೇಳೆ ಎದುರಾಳಿ ಆಟಗಾರನ ಬಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ಯಾಟಿನ್ಸನ್ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಜೇಮ್ಸ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಕೂಡಾ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ