ಜಾಸನ್ ರಾಯ್ ಬದಲು ಜೇಮ್ಸ್ ವಿನ್ಸ್
Team Udayavani, Nov 9, 2021, 6:15 AM IST
ದುಬಾೖ: ಇಂಗ್ಲೆಂಡಿನ ಬಿರುಸಿನ ಆರಂಭಕಾರ ಜಾಸನ್ ರಾಯ್ ಗಾಯಾಳಾಗಿ ಟಿ20 ವಿಶ್ವಕಪ್ನಿಂದ ಬೇರ್ಪಟ್ಟಿದ್ದಾರೆ. ಇವರ ಸ್ಥಾನಕ್ಕೆ ಜೇಮ್ಸ್ ವಿನ್ಸ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಸೂಪರ್-12 ಹಂತದ ಪಂದ್ಯದ ವೇಳೆ ಜಾಸನ್ ರಾಯ್ ಕಾಲಿನ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ನೋವು ಗಂಭೀರವಾಗಿದ್ದರಿಂದ ಅವರಿಗೆ ನಡೆಯಲೂ ಸಾಧ್ಯವಾಗಿರಲಿಲ್ಲ.
“ಈ ಕೂಟದಲ್ಲಿ ನಮ್ಮದೊಂದು ಅಮೋಘ ಪಯಣ. ಇಂಗ್ಲೆಂಡ್ ವಿಶ್ವಕಪ್ ಗೆಲ್ಲಲಿ ಎಂದು ಹಾರೈಸುತ್ತೇನೆ. ಈಗಾಗಲೇ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದು, ಮುಂದಿನ ವರ್ಷದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗುವ ವಿಶ್ವಾಸ ಹೊಂದಿದ್ದೇನೆ’ ಎಂಬುದಾಗಿ ಜಾಸನ್ ರಾಯ್ ಹೇಳಿದ್ದಾರೆ.ಜೇಮ್ಸ್ ವಿನ್ಸ್ ಮೂವರು ಮೀಸಲು ಆಟಗಾರರಲ್ಲಿ ಒಬ್ಬರಾಗಿದ್ದರು.
ಇದನ್ನೂ ಓದಿ:ಐಸಿಸಿ ಟಿ-20 ವಿಶ್ವಕಪ್: ಕ್ಯಾಪ್ಟನ್ ಕೊಹ್ಲಿಗೆ ಗೆಲುವಿನ ವಿದಾಯ