ಡೆಲ್ ಪೊಟ್ರೊ-ಆ್ಯಂಡರ್ಸನ್ ನಡುವೆ ಫೈನಲ್
Team Udayavani, Mar 4, 2018, 6:55 AM IST
ಅಕಪುಲ್ಕೊ: ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಮತ್ತು ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಮೆಕ್ಸಿಕನ್ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದ್ದಾರೆ.
ಶುಕ್ರವಾರ ರಾತ್ರಿಯ ಸೆಮಿಫೈನಲ್ ಸೆಣಸಾಟದಲ್ಲಿ ಡೆಲ್ ಪೊಟ್ರೊ 6-4, 6-2 ಅಂತರದಿಂದ ಜರ್ಮನಿಯ ಅಗ್ರ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು 6-4, 6-2 ಅಂತರದಿಂದ ಪರಾಭವಗೊಳಿಸಿದರು. ಇನ್ನೊಂದು ಸೆಮಿಫೈನಲ್ನಲ್ಲಿ ಆ್ಯಂಡರ್ಸನ್ ಅಮೆರಿಕದ ಜೇರ್ಡ್ ಡೊನಾಲ್ಡ್ಸನ್ ವಿರುದ್ಧ 6-3, 4-6, 6-3 ಅಂತರದ ಜಯ ಸಾಧಿಸಿದರು.
ಗಾಯಾಳು ರಫೆಲ್ ನಡಾಲ್ ಕೊನೆ ಗಳಿಗೆಯಲ್ಲಿ ಹಿಂದೆ ಸರಿದುದರಿಂದ ಜ್ವೆರೇವ್ಗೆ ಅಗ್ರ ಶ್ರೇಯಾಂಕ ಲಭಿಸಿತ್ತು. ಆದರೆ ಡೆಲ್ ಪೊಟ್ರೊ ವಿರುದ್ಧ ಜ್ವೆರೇವ್ ಛಾತಿಗೆ ತಕ್ಕ ಆಟವಾಡುವಲ್ಲಿ ವಿಫಲರಾದರು. ಜರ್ಮನ್ ಆಟಗಾರನ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಿದ ಡೆಲ್ ಪೊಟ್ರೊ 90 ನಿಮಿಷಗಳಲ್ಲಿ ಗೆದ್ದು ಬಂದರು.
ಆದರೆ 5ನೇ ಶ್ರೇಯಾಂಕದ ಆ್ಯಂಡರ್ಸನ್ ಗೆಲುವಿಗಾಗಿ 3 ಸೆಟ್ಗಳ ಹೋರಾಟ ನಡೆಸಬೇಕಾಯಿತು. ಫೈನಲ್ನಲ್ಲಿ ಗೆದ್ದರೆ ಸತತ 2 ಪ್ರಶಸ್ತಿಗಳು ದಕ್ಷಿಣ ಆಫ್ರಿಕಾ ಟೆನಿಸಿಗನಿಗೆ ಒಲಿದಂತಾಗುತ್ತದೆ. 2 ವಾರಗಳ ಹಿಂದೆ ಆ್ಯಂಡರ್ಸನ್ “ನ್ಯೂಯಾರ್ಕ್ ಓಪನ್’ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ