Kashmir;ಬ್ಯಾಟ್ ಫ್ಯಾಕ್ಟರಿಯಲ್ಲಿ ಸಚಿನ್ ತೆಂಡುಲ್ಕರ್!: ಎಲ್ಲರಿಗೂ ಅಚ್ಚರಿ
Team Udayavani, Feb 17, 2024, 11:16 PM IST
ಶ್ರೀನಗರ: ಲೆಜೆಂಡ್ರಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಶನಿವಾರ ಕಾಶ್ಮೀರದ ಬ್ಯಾಟ್ ಫ್ಯಾಕ್ಟರಿಯೊಂದಕ್ಕೆ ದಿಢೀರ್ ಭೇಟಿ ನೀಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು. ಜತೆಯಲ್ಲಿ ಪತ್ನಿ ಅಂಜಲಿ, ಪುತ್ರಿ ಸಾರಾ ಕೂಡ ಇದ್ದರು.
ಶ್ರೀನಗರ-ಜಮ್ಮು ಹೈವೇಯಲ್ಲಿರುವ ಚಾಸೂì ಬ್ಯಾಟ್ ತಯಾರಿಕಾ ಕಂಪೆನಿಗೆ ಭೇಟಿ ನೀಡಿದ್ದನ್ನು ಅಲ್ಲಿನ ಎಂ.ಜೆ. ನ್ಪೋರ್ಟ್ಸ್ನ ಮಾಲಕ ಮೊಹಮ್ಮದ್ ಶಾಹೀನ್ ಅತ್ಯಂತ ಖುಷಿ ಹಾಗೂ ಅಷ್ಟೇ ಅಚ್ಚರಿಯಿಂದ ಹೇಳಿಕೊಂಡಿದ್ದಾರೆ.
“ಕಾಶ್ಮೀರ್ ವಿಲ್ಲೋದಿಂದ ತಯಾರಿ ಸಲಾದ ಬ್ಯಾಟ್ಗಳ ಗುಣಮಟ್ಟ ವನ್ನು ಸಚಿನ್ ಪರಿಶೀಲಿಸಿ ತೃಪ್ತಿ ವ್ಯಕ್ತಪಡಿ ಸಿದರು. ತಾನು ಕಾಶ್ಮೀರ್ ವಿಲ್ಲೋ ಮತ್ತು ಇಂಗ್ಲಿಷ್ ವಿಲ್ಲೋದಿಂದ ತಯಾರಿ ಸಲಾಗುವ ಬ್ಯಾಟ್ಗಳನ್ನು ಹೋಲಿಕೆ ಮಾಡಲು ಆಗಮಿಸಿದ್ದಾಗಿ ತಿಳಿಸಿದರು’ ಎಂಬುದಾಗಿ ಶಾಹೀನ್ ಹೇಳಿದರು.
“ಸ್ಥಳೀಯ ಬ್ಯಾಟ್ಗಳ ಪ್ರಚಾರಕ್ಕೆ ತಮ್ಮ ಧ್ವನಿಯ ಅಗತ್ಯವಿದೆ ಎಂದು ವಿನಂತಿಸಿಕೊಂಡಾಗ ನಿರಾಕರಿಸಲಿಲ್ಲ. ಹಸ್ತಾಕ್ಷರವನ್ನೂ ಹಾಕಿದರು’ ಎಂದರು.