ಬ್ಯಾಡ್ಮಿಂಟನ್ ರ್‍ಯಾಂಕಿಂಗ್: ಕೆಂಟೊ ಮೊಮೊಟ ನಂಬರ್ ವನ್
Team Udayavani, Sep 29, 2018, 6:00 AM IST
ಟೋಕಿಯೊ: ವಿಶ್ವ ಚಾಂಪಿಯನ್ ಕೆಂಟೊ ಮೊಮೊಟ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಮೊದಲ ಜಪಾನಿ ಬ್ಯಾಡ್ಮಿಂಟನ್ ಆಟಗಾರನಾಗಿ ಮೂಡಿಬಂದಿದ್ದಾರೆ. ಅವರು ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಸ್ಥಾನಕ್ಕೆ ಸಂಚಕಾರ ತಂದರು. ಅಕ್ಸೆಲ್ಸೆನ್ ಈಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಚೀನದ ಶಿ ಯುಕಿ ದ್ವಿತೀಯ ಸ್ಥಾನದಲ್ಲಿದ್ದಾರೆ.
24ರ ಹರೆಯದ ಆಕ್ರಮಣಕಾರಿ ಆಟಗಾರ ಕೆಂಟೊ ಮೊಮೊಟ ಈ ವರ್ಷದ ಮಲೇಶ್ಯ ಓಪನ್ ಫೈನಲ್ ಹೊರತುಪಡಿಸಿ ಬಹುತೇಕ ಕೂಟಗಳಲ್ಲಿ ಚಾಂಪಿಯನ್ ಆಗಿದ್ದರು. ಇಂಡೋನೇಶ್ಯ ಓಪನ್ ಫೈನಲ್‌ನಲ್ಲಿ ಅಕ್ಸೆಲ್ಸೆನ್‌ಗೆ ಸೋಲುಣಿಸಿ ಮೆರೆದಿದ್ದರು. ಇದೇ ತಿಂಗಳಲ್ಲಿ ತವರಿನ ಜಪಾನ್ ಓಪನ್ ಕೂಟದಲ್ಲೂ ಪ್ರಶಸ್ತಿ ಎತ್ತಿದ್ದರು. ಆದರೆ ಕಳೆದ ವಾರದ ಚೀನ ಓಪನ್ ಫೈನಲ್‌ನಲ್ಲಿ ಆ್ಯಂಟನಿ ಸಿನಿಸುಕ ಅವರಿಗೆ ಶರಣಾಗಿದ್ದರು.
2016ರಲ್ಲಿ ಅನಧಿಕೃತ ಕ್ಯಾಸಿನೊ ಒಂದಕ್ಕೆ ಭೇಟಿಯಿತ್ತು ಅಮಾನತಿಗೊಳಗಾಗಿದ್ದ ಕೆಂಟೊ ಮೊಮೊಟ, ಅಂದಿನ ರಿಯೋ ಒಲಿಂಪಿಕ್ಸ್‌ನಿಂದಲೂ ಹೊರಗುಳಿಯುವ ಸಂಕಟಕ್ಕೆ ಸಿಲುಕಿದ್ದರು. ಕಳೆದ ವರ್ಷದ ಕೆನಡಿಯನ್ ಓಪನ್ ಮೂಲಕ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ಮರಳಿದ ಬಳಿಕ ಕ್ಷಿಪ್ರಗತಿಯಲ್ಲಿ ಪ್ರಗತಿ ಕಾಣುತ್ತ ಹೋದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್.ಶೆಟ್ಟಿ
30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ಹೊಸ ಸೇರ್ಪಡೆ
ಟ್ವಿಟರ್ VS ಕೂ : ವಿದೇಶಿ ಮೂಲದ ಟ್ವಿಟರ್ನ ಎದುರು ಸ್ವದೇಶಿ ಕೂ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಸಲು ಟಿಎಂಸಿಗೆ ಆರ್ ಜೆಡಿ ಬೆಂಬಲ..!
ದ್ವಿಚಕ್ರ ವಾಹನ ಸವಾರರೇ ಎಚ್ಚರ : ಮಲ್ಪೆ – ಪಡುಕರೆ ಸಂಪರ್ಕ ಸೇತುವೆಯ ರಸ್ತೆ ಮಧ್ಯೆ ಬಿರುಕು
ಜೂನ್. 21 ರಿಂದ ಜುಲೈ. 5ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ : ಸಚಿವ ಸುರೇಶ್ ಕುಮಾರ್
ಲಾಕ್ಡೌನ್ನಿಂದ ಶೇ. 96 ಜನರ ಆದಾಯಕ್ಕೆ ಬ್ರೇಕ್