ಬಾಲಿವುಡ್ ನಟಿ ನಿಧಿ ಜತೆ ಕೆ.ಎಲ್. ರಾಹುಲ್ ಪ್ರತ್ಯಕ್ಷ!
Team Udayavani, Jun 1, 2018, 6:00 AM IST
ಮುಂಬಯಿ: ಬಾಲಿ ವುಡ್ನಲ್ಲಿ ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿ ನಿಧಿ ಅಗರ್ವಾಲ್ ಜತೆ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಇಬ್ಬರೂ ಜತೆ ಯಾಗಿ ಡಿನ್ನರ್ ಮುಗಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋವನ್ನು ಸ್ವತಃ ನಿಧಿ ಅಗರ್ವಾಲ್ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕೆ.ಎಲ್.ರಾಹುಲ್ ಆಡಿದ್ದರು. 14 ಪಂದ್ಯ ಗಳಿಂದ 659 ರನ್ ಗಳಿಸಿ ಪ್ರಚಂಡ ಆಟ ಪ್ರದರ್ಶಿಸಿದ್ದರು. ನಿಧಿ ಅಗ ರ್ವಾಲ್ ಬಾಲಿವುಡ್ನಲ್ಲಿ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಜತೆಗೆ ಆಕೆ ರೂಪದರ್ಶಿ ಕೂಡ ಆಗಿದ್ದಾರೆ.
ನಿಧಿ ಮೂಲತಃ ಹೈದರಾಬಾದ್ನವರಾದರೂ ಕೆಲವು ಕಾಲದಿಂದ ಮುಂಬಯಿಯಲ್ಲಿ ನೆಲೆಸಿದ್ದಾರೆ.