ಜಾಂಟಿ ರೋಡ್ಸ್ ನೆನಪಿಸಿದ ಕೊಹ್ಲಿ ಫೀಲ್ಡಿಂಗ್
Team Udayavani, Feb 6, 2020, 7:15 AM IST
ಹ್ಯಾಮಿಲ್ಟನ್: ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಮಾತ್ರವಲ್ಲ ಉತ್ತಮ ಫೀಲ್ಡರ್ ಕೂಡ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ಬುಧವಾರ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತನ್ನ ಅದ್ಭುತ ಕೈಚಳಕದಿಂದ ಹೆನ್ರಿ ನಿಕೋಲ್ಸ್ ಅವರನ್ನು ರನೌಟ್ ಮಾಡುವ ಮೂಲಕ ಅವರು ಗಮನ ಸೆಳೆದಿದ್ದಾರೆ. ಮಿಂಚಿನ ವೇಗದ ನಡೆಯಿಂದ ನಿಕೋಲ್ಸ್ ಅವರನ್ನು ರನೌಟ್ ಮಾಡಿದ ಕೊಹ್ಲಿ ಅವರು ಜಾಂಟಿ ರೋಡ್ಸ್ ಅವರನ್ನು ನೆನಪಿಸುವಂತೆ ಮಾಡಿದರು.
ಶಾರ್ಟ್ ಕವರ್ ಕ್ಷೇತ್ರದಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಕೊಹ್ಲಿ ಕ್ಷಣ ಮಾತ್ರದಲ್ಲಿ ಚೆಂಡನ್ನು ಪಡೆದು ಸ್ಟಂಪ್ಸ್ಗೆಎಸೆದರು. ಬ್ಯಾಟ್ಸ್ಮನ್ ನಿಕೋಲ್ಸ್ ಡೈವ್ ಮಾಡಿದ್ದರೂ ಕ್ರೀಸ್ ತಲುಪಲು ಸಾಧ್ಯವಾಗಲೇ ಇಲ್ಲ. ಅವರು ಕ್ರೀಸ್ಗೆ ತಲುಪುವ ಮೊದಲೇ ಕೊಹ್ಲಿ ಎಸೆದ ಚೆಂಡು ಸ್ಟಂಪ್ಸ್ನ ಬೇಲ್ಸ್ ಹಾರಿಸಿತ್ತು.