IPL 2024 ಸುನೀಲ್‌ ನಾರಾಯಣ್‌ ಅಬ್ಬರ; ಕೆಕೆಆರ್‌ ಸೂಪರ್‌ ಬ್ಯಾಟಿಂಗ್‌


Team Udayavani, Apr 4, 2024, 1:20 AM IST

IPL 2024 ಸುನೀಲ್‌ ನಾರಾಯಣ್‌ ಅಬ್ಬರ; ಕೆಕೆಆರ್‌ ಸೂಪರ್‌ ಬ್ಯಾಟಿಂಗ್‌

ವಿಶಾಖಪಟ್ಟಣ: ಅವಿಸ್ಮರಣೀಯ ಆಟದ ಪ್ರದರ್ಶನ ನೀಡಿದ ಕೋಲ್ಕತಾ ನೈಟ್‌ರೈಡರ್ ತಂಡವು ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 106 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಸಂಭ್ರಮಿಸಿದೆ.

ಸುನೀಲ್‌ ನಾರಾಯಣ್‌, ರಘುವಂಶಿ ಮತ್ತು ರಸೆಲ್‌ ಅವರ ಬ್ಯಾಟಿಂಗ್‌ ವೈಭವದಿಂಧ ಕೆಕೆಆರ್‌ ತಂಡವು 7 ವಿಕೆಟಿಗೆ 272 ರನ್ನುಗಳ ಬೃಹತ್‌ ಮೊತ್ತ ಪೇರಿಸಿತ್ತು. ಇದು ಈ ಕೂಟದ ಗರಿಷ್ಠ ಮೊತ್ತಕ್ಕಿಂತ 5 ರನ್‌ ಕಡಿಮೆಯಾಗಿದೆ. ಈ ಮೊದಲು ಹೈದರಾಬಾದ್‌ ತಂಡವು 3 ವಿಕೆಟಿಗೆ 277 ರನ್‌ ಪೇರಿಸಿದ್ದು ಗರಿಷ್ಠ ಮೊತ್ತವಾಗಿತ್ತು.

ಗೆಲ್ಲಲು ಕಠಿನ ಗುರಿ ಪಡೆದ ಡೆಲ್ಲಿ ತಂಡವು ಕೆಕೆಆರ್‌ ತಂಡದ ಅಮೋಘ ದಾಳಿಗೆ ತತ್ತರಿಸಿ 17.2 ಓವರ್‌ಗಳಲ್ಲಿ 166 ರನ್ನಿಗೆ ಆಲೌಟಾಯಿತು. 33 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ರಿಷಬ್‌ ಪಂತ್‌ ಮತ್ತು ಟ್ರಿಸ್ಟನ್‌ ಸ್ಟಬ್ಸ್ ಆಸರೆಯಾಗಿದ್ದರು. ಅವರಿಬ್ಬರು ಐದನೇ ವಿಕೆಟಿಗೆ 93 ರನ್ನುಗಳ ಜತೆಯಾಟ ನಡೆಸಿದ್ದರು. ಆದರೆ ಈ ಜೋಡಿ ಮುರಿಯುತ್ತಲೇ ಮತ್ತೆ ಕುಸಿದ ಡೆಲ್ಲಿ ತಂಡವು 166 ರನ್ನಿಗೆ ಆಲೌಟಾಯಿತು.

ವೈಭವ್‌ ಅರೋರ ಮತ್ತು ವರುಣ್‌ ಚಕ್ರವರ್ತಿ ತಲಾ ಮೂರು ವಿಕೆಟ್‌ ಕಿತ್ತು ಕೆಕೆಆರ್‌ನ ಗೆಲುವಿಗೆ ಕಾರಣರಾದರು. ಮಿಚೆಲ್‌ ಸ್ಟಾರ್ಕ್‌ ಎರಡು ವಿಕೆಟ್‌ ಪಡೆದರು.

ಸುನೀಲ್‌ ನಾರಾಯಣ್‌ ಅಬ್ಬರ
ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕೆಕೆಆರ್‌, ಮೊನ್ನೆಯ ಆರ್‌ಸಿಬಿ ಎದುರಿನ ಬ್ಯಾಟಿಂಗ್‌ ವೈಭವವನ್ನೇ ಪುನರಾವರ್ತಿಸಿತು. ಸುನೀಲ್‌ ನಾರಾಯಣ್‌ ಮತ್ತೂಂದು ವಿಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಡೆಲ್ಲಿ ಬೌಲಿಂಗ್‌ ತರಗೆಲೆಯಾಯಿತು. ಪವರ್‌ ಪ್ಲೇಯಲ್ಲಿ ಒಂದಕ್ಕೆ 88 ರನ್‌ ಒಟ್ಟುಗೂಡಿತು. ಇದು ಐಪಿಎಲ್‌ ಪವರ್‌ ಪ್ಲೇಯಲ್ಲಿ ಕೆಕೆಆರ್‌ ದಾಖಲಿಸಿದ 2ನೇ ಅತ್ಯಧಿಕ ಗಳಿಕೆ. ಆರ್‌ಸಿಬಿ ಎದುರಿನ 2017ರ ಬೆಂಗಳೂರು ಪಂದ್ಯದಲ್ಲಿ ನೋಲಾಸ್‌ 105 ರನ್‌ ಪೇರಿಸಿದ್ದು ದಾಖಲೆ.

ಸುನೀಲ್‌ ನಾರಾಯಣ್‌ 21 ಎಸೆತಗಳಿಂದ ಅರ್ಧ ಶತಕ ಬಾರಿಸಿ ಆರ್ಭಟಿಸಿದರು. ಸರಿಯಾಗಿ 6 ಓವರ್‌ ಮುಕ್ತಾಯಕ್ಕೆ ಈ ಫಿಫ್ಟಿ ದಾಖಲಾಯಿತು. 10 ಓವರ್‌ ಅಂತ್ಯಕ್ಕೆ ಕೆಕೆಆರ್‌ 135 ರನ್‌ ರಾಶಿ ಹಾಕಿತು. ಇದು ಮೊದಲ 10 ಓವರ್‌ಗಳಲ್ಲಿ ದಾಖಲಾದ 2ನೇ ಅತ್ಯಧಿಕ ಗಳಿಕೆ. ಮೊನ್ನೆ ಮುಂಬೈ ವಿರುದ್ಧ ಹೈದರಾಬಾದ್‌ 2ಕ್ಕೆ 148 ರನ್‌ ಗಳಿಸಿದ್ದು ದಾಖಲೆ.
ಸುನೀಲ್‌ ನಾರಾಯಣ್‌ ಮುಟ್ಟಿದ್ದೆಲ್ಲ ರಾಕೆಟ್‌ ವೇಗದಲ್ಲಿ ಸೀಮಾರೇಖೆ ದಾಟುತ್ತಿತ್ತು. ಬೌಂಡರಿ, ಸಿಕ್ಸರ್‌ಗಳ ಮಹಾಮಳೆ ಸುರಿಯಿತು. 13ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ವಿಂಡೀಸ್‌ ಕ್ರಿಕೆಟಿಗ 39 ಎಸೆತಗಳಿಂದ 85 ರನ್‌ ಬಾರಿಸಿದರು. ಸಿಡಿಸಿದ್ದು 7 ಫೋರ್‌ ಮತ್ತು 7 ಸಿಕ್ಸರ್‌. ಸುನೀಲ್‌ ನಾರಾಯಣ್‌ ಮತ್ತು ಅಂಗ್‌ಕೃಷ್‌ ರಘುವಂಶಿ 2ನೇ ವಿಕೆಟಿಗೆ 8 ಓವರ್‌ಗಳಿಂದ 104 ರನ್‌ ಪೇರಿಸಿದರು. 18 ವರ್ಷದ ರಘುವಂಶಿ ಪಾಲಿಗೆ ಇದು ಐಪಿಎಲ್‌ ಪದಾರ್ಪಣ ಪಂದ್ಯ. ತಮ್ಮ ಆಯ್ಕೆಯನ್ನು ಭರ್ಜರಿಯಾಗಿ ಸಮರ್ಥಿಸಿಕೊಂಡ ಅವರು 27 ಎಸೆತ ಎದುರಿಸಿ 54 ರನ್‌ ಕೊಡುಗೆ ಸಲ್ಲಿಸಿದರು. ಇದರಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ ಒಳಗೊಂಡಿತ್ತು.

ಇದಕ್ಕೂ ಮುನ್ನ ನಾರಾಯಣ್‌-ಫಿಲ್‌ ಸಾಲ್ಟ್ ಮೊದಲ ವಿಕೆಟಿಗೆ 4.3 ಓವರ್‌ಗಳಿಂದ 60 ರನ್‌ ರಾಶಿ ಹಾಕಿ ಪ್ರಚಂಡ ಆರಂಭ ಒದಗಿಸಿದ್ದರು. ಇದರಲ್ಲಿ ಸಾಲ್ಟ್ ಗಳಿಕೆ ಬರೀ 18 ರನ್‌. ನಾರಾಯಣ್‌ ಮತ್ತು ರಘುವಂಶಿ ಬಳಿಕ ಆ್ಯಂಡ್ರೆ ರಸೆಲ್‌ ಸಿಡಿದು ನಿಂತರು.

ಕೆಕೆಆರ್‌ 18 ಸಿಕ್ಸರ್‌ ಸಿಡಿಸಿತು. ಇದು ಐಪಿಎಲ್‌ ಪಂದ್ಯವೊಂದರಲ್ಲಿ ಕೆಕೆಆರ್‌ ಬಾರಿಸಿದ ಅತ್ಯಧಿಕ ಸಿಕ್ಸರ್‌ಗಳ ದಾಖಲೆಯಾಗಿದೆ.

ಕೆಲವೇ ದಿನಗಳ ಹಿಂದೆ ಸನ್‌ರೈಸರ್ ಹೈದರಾಬಾದ್‌ 3ಕ್ಕೆ 277 ರನ್‌ ಪೇರಿಸಿ ದಾಖಲೆ ನಿರ್ಮಿಸಿತ್ತು. ಕೆಕೆಆರ್‌ ಇದನ್ನು ಮೀರಿ ನಿಲ್ಲುವ ರೀತಿಯಲ್ಲಿ ಬ್ಯಾಟಿಂಗ್‌ ಪ್ರದರ್ಶಿಸಿತು. ಆದರೆ ಸ್ವಲ್ಪದರಲ್ಲೇ ಹಿಂದುಳಿಯಿತು.

ಸ್ಕೋರ್‌ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಫಿಲ್‌ ಸಾಲ್ಟ್ ಸಿ ಸ್ಟಬ್ಸ್ ಬಿ ನೋರ್ಜೆ 15
ಸುನೀಲ್‌ ನಾರಾಯಣ್‌ ಸಿ ಪಂತ್‌ ಬಿ ಮಾರ್ಷ್‌ 85
ಎ. ರಘುವಂಶಿ ಸಿ ಇಶಾಂತ್‌ ಬಿ ನೋರ್ಜೆ 54
ಆ್ಯಂಡ್ರೆ ರಸೆಲ್‌ ಬಿ ಇಶಾಂತ್‌ 41
ಶ್ರೇಯಸ್‌ ಅಯ್ಯರ್‌ ಸಿ ಮಾರ್ಷ್‌ ಬಿ ಅಹ್ಮದ್‌ 18
ರಿಂಕು ಸಿಂಗ್‌ ಸಿ ವಾರ್ನರ್‌ ಬಿ ನೋರ್ಜೆ 26
ವೆಂಕಟೇಶ್‌ ಅಯ್ಯರ್‌ ಔಟಾಗದೆ 5
ರಮಣ್‌ದೀಪ್‌ ಸಿಂಗ್‌ ಸಿ ಶಾ ಬಿ ಇಶಾಂತ್‌ 2
ಮಿಚೆಲ್‌ ಸ್ಟಾರ್ಕ್‌ ಔಟಾಗದೆ 1
ಇತರ 22
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ)272
ವಿಕೆಟ್‌ ಪತನ: 1-60, 2-164, 3-176, 4-232, 5-264, 6-264, 7-266.
ಬೌಲಿಂಗ್‌: ಖಲೀಲ್‌ ಅಹ್ಮದ್‌ 4-0-43-1
ಇಶಾಂತ್‌ ಶರ್ಮ 3-0-43-2
ಆ್ಯನ್ರಿಚ್‌ ನೋರ್ಜೆ 4-0-59-3
ರಾಶಿಕ್‌ ಸಲಾಮ್‌ 3-0-47-0
ಸುಮಿತ್‌ ಕುಮಾರ್‌ 2-0-19-0
ಅಕ್ಷರ್‌ ಪಟೇಲ್‌ 1-0-18-0
ಮಿಚೆಲ್‌ ಮಾರ್ಷ್‌ 3-0-37-1
ಡೆಲ್ಲಿ ಕ್ಯಾಪಿಟಲ್ಸ್‌
ಡೇವಿಡ್‌ ವಾರ್ನರ್‌ ಬಿ ಸ್ಟಾರ್ಕ್‌ 18
ಪೃಥ್ವಿ ಶಾ ಸಿ ವರುಣ್‌ ಬಿ ಅರೋರ 10
ಮಿಚೆಲ್‌ ಮಾರ್ಷ್‌ ಸಿ ರಮಣ್‌ದೀಪ್‌ ಬಿ ಸ್ಟಾರ್ಕ್‌ 0
ಅಭಿಷೇಕ್‌ ಪೊರೆಲ್‌ ಸಿ ನಾರಾಯಣ್‌ ಬಿ ಅರೋರ 0
ರಿಷಬ್‌ ಪಂತ್‌ ಸಿ ಅಯ್ಯರ್‌ ಬಿ ವರುಣ್‌ 55
ಟ್ರಿಸ್ಟನ್‌ ಸ್ಟಬ್ಸ್ ಸಿ ಸ್ಟಾರ್ಕ್‌ ಬಿ ವರುಣ್‌ 54
ಅಕ್ಷರ್‌ ಪಟೇಲ್‌ ಸಿ ಬದಲಿಗ ಬಿ ವರುಣ್‌ 0
ಸುಮಿತ್‌ ಕುಮಾರ್‌ ಸಿ ಬದಲಿಗ ಬಿ ನಾರಾಯಣ್‌ 7
ರಶಿಖ್‌ ಸಲಮ್‌ ಸಿ ಸಾಲ್ಟ್ ಬಿ ಅರೋರ 1
ಅನ್ರಿಚ್‌ ನೋರ್ಜೆ ಸಿ ಅಯ್ಯರ್‌ ಬಿ ರಸೆಲ್‌ 4
ಇಶಾಂತ್‌ ಶರ್ಮ ಔಟಾಗದೆ 1
ಇತರ: 16
ಒಟ್ಟು (17.2 ಓವರ್‌ಗಳಲ್ಲಿ ಆಲೌಟ್‌) 166
ವಿಕೆಟ್‌ ಪತನ: 1-21, 2-26, 3-27, 4-33, 5-126, 6-126, 7-159, 8-159, 9-161
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 3-0-25-2
ವೈಭವ್‌ ಅರೋರ 4-0-27-3
ಆ್ಯಂಡ್ರೆ ರಸೆಲ್‌ 1.2-0-14-1
ಸುನೀಲ್‌ ನಾರಾಯಣ್‌ 4-0-29-1
ವರುಣ್‌ ಚಕ್ರವರ್ತಿ 4-0-33-3
ವೆಂಕಟೇಶ್‌ ಅಯ್ಯರ್‌ 1-0-28-0

ಪಂದ್ಯಶ್ರೇಷ್ಠ: ಸುನೀಲ್‌ ನಾರಾಯಣ್‌

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.