ಬೆಳಗಾವಿ ಪ್ಯಾಂಥರ್ ಜಯಭೇರಿ

Team Udayavani, Sep 13, 2017, 6:35 AM IST

Ban13.jpg

ಮೈಸೂರು: ಸ್ಟಾಲಿನ್‌ ಹೂವರ್‌ ದಾಖಲಿಸಿದ ಅರ್ಧಶತಕ, ಕೆ.ಗೌತಮ್‌ ಬಿಗು ಬೌಲಿಂಗ್‌ ದಾಳಿಯ ನೆರವಿನಿಂದ ಬೆಳಗಾವಿ ಪ್ಯಾಂಥರ್ ಕೆಪಿಎಲ್‌ನಲ್ಲಿ ಬಳ್ಳಾರಿ ಟಸ್ಕರ್ ವಿರುದ್ಧ 25 ರನ್‌ ಜಯ ಸಾಧಿಸಿದೆ.

ಇಲ್ಲಿನ ಮಾನಸಗಂಗೋತ್ರಿಯ ನರಸಿಂಹರಾಜ ಒಡೆಯರ್‌ ಮೈದಾನದಲ್ಲಿ ನಡೆದ ಕೆಪಿಎಲ್‌ 6ನೇ ಆವೃತ್ತಿಯ ಮೈಸೂರು ಚರಣದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬೆಳಗಾವಿ 19.4 ಓವರ್‌ಗೆ 154 ರನ್‌ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಬಳ್ಳಾರಿ ಟಸ್ಕರ್ 20 ಓವರ್‌ಗೆ 9 ವಿಕೆಟ್‌ ಕಳೆದುಕೊಂಡು 129 ರನ್‌ ಬಾರಿಸಿ ಸೋಲುಂಡಿತು.

ಬಳ್ಳಾರಿ ಪರ ಕೆ.ಬಿ.ಪವನ್‌(64) ಅರ್ಧಶತಕ ದಾಖಲಿಸಿದರು. ಆದರೂ ಅವರ ಹೋರಾಟ ಗೆಲುವಿಗೆ ಸಾಕಾಗಲಿಲ್ಲ. ಉಳಿದಂತೆ ಅಭಿನವ್‌ ಮನೋಹರ್‌ (21) ಅಲ್ಪ ಕಾಣಿಕೆ ನೀಡಿದರು. ಉಳಿದಂತೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ವೈಫ‌ಲ್ಯ ಎದುರಿಸಿದ್ದು, ಬಳ್ಳಾರಿ ಸೋಲಿಗೆ ಪ್ರಮುಖ ಕಾರಣವಾಯಿತು. ಬೆಳಗಾವಿ ಪರ ಕೆ.ಗೌತಮ್‌ 23ಕ್ಕೆ 4 ವಿಕೆಟ್‌ ಪಡೆದು ಮಿಂಚಿದರು.

ಬೆಳಗಾವಿಗೆ ಹೂವರ್‌ ಆಸರೆ:
ಆರಂಭಿಕರಾಗಿ ಕಣಕ್ಕೆ ಇಳಿದ ಬಿ.ಆರ್‌.ಶರತ್‌ ಮತ್ತು ಸ್ಟಾಲಿನ್‌ ಹೂವರ್‌ ಮೊದಲ ವಿಕೆಟ್‌ಗೆ 6.6 ಓವರ್‌ಗೆ 52 ರನ್‌ ಜತೆಯಾಟ ನೀಡಿದರು. ಈ ಸಂದರ್ಭದಲ್ಲಿ ಶರತ್‌ (17) ಭವೇಶ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರ ಬಂದ ಕೆ.ಗೌತಮ್‌(5) ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ.

ಹೂವರ್‌, ಪಾಂಡೆ ಸ್ಫೋಟ:
3ನೇ ವಿಕೆಟ್‌ಗೆ ಜತೆಯಾದ ಹೂವರ್‌ ಮತ್ತು ಮನೀಶ್‌ ಪಾಂಡೆ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. ಇದರಿಂದಾಗಿ ಬೆಳಗಾವಿ ತಂಡ ಮೊತ್ತ ಏರುತ್ತಾ ಸಾಗಿತ್ತು. ಈ ಜೋಡಿ 12.3 ಓವರ್‌ಗೆ ತಂಡದ ಮೊತ್ತವನ್ನು 110 ರನ್‌ಗೆ ತೆಗುದೊಂಡು ಹೋದರು. ಈ ಹಂತದಲ್ಲಿ ಬೆಳಗಾವಿ ದೊಡ್ಡ ಮೊತ್ತ ದಾಖಲಿಸುವ ಸೂಚನೆ ನೀಡಿತ್ತು. ಆದರೆ ಆಗಿದ್ದೆ ಬೇರೆ. ಪಾಂಡೆ ಮತ್ತು ಹೂವರ್‌ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಸೇರಿದರು. ಇದು ಬೆಳಗಾವಿಗೆ ಆಘಾತವಾಯಿತು. ಪಾಂಡೆ 12 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸರ್‌ ಸೇರಿದಂತೆ 24 ರನ್‌ ಬಾರಿಸಿದರು. ಹೂವರ್‌ 43 ಎಸೆತದಲ್ಲಿ 62 ರನ್‌ ಬಾರಿಸಿದರು. ಅವರ ಆಟದಲ್ಲಿ 4 ಬೌಂಡರಿ, 4 ಸಿಕ್ಸರ್‌ ಸೇರಿತ್ತು.

ಕೊನೆಯಲ್ಲಿ ಮಾರಕವಾದ ಪ್ರತೀಕ್‌ ಜೈನ್‌:
ಪಾಂಡೆ ಮತ್ತು ಹೂವರ್‌ ವಿಕೆಟ್‌ ಕಳೆದುಕೊಂಡ ಮೇಲೆ ಬಳ್ಳಾರಿ ತಂಡದ ಪ್ರತೀಕ್‌ ಜೈನ್‌ ಮಾರಕವಾದರು. ಒಬ್ಬರ ನಂತರ ಒಬ್ಬರ ವಿಕೆಟ್‌ ಕಬಳಿಸಿದರು. ಇದರಿಂದಾಗಿ ಬೆಳಗಾವಿ ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ಆಲೌಟ್‌ಗೆ ತುತ್ತಾಯಿತು. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಕಾಯ್ದುಕೊಳ್ಳವಲ್ಲಿ ಮತ್ತು ರನ್‌ ಏರಿಸುವಲ್ಲಿ ವಿಫ‌ಲರಾದರು. ಬಳ್ಳಾರಿ ಪರ ಪ್ರತೀಕ್‌ ಜೈನ್‌ 29ಕ್ಕೆ 3 ವಿಕೆಟ್‌ ಪಡೆದರೆ, ಅಮಿತ್‌ ವರ್ಮ, ಭವೇಶ್‌ ಮತ್ತು ಅನಿಲ್‌ ತಲಾ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಬೆಳಗಾವಿ ಪ್ಯಾಂಥರ್ 19.4 ಓವರ್‌ಗೆ 154/10(ಸ್ಟಾಲಿನ್‌ ಹೂವರ್‌ 62, ಮನೀಶ್‌ ಪಾಂಡೆ 24, ಪ್ರತೀಕ್‌ ಜೈನ್‌ 29ಕ್ಕೆ 3). ಸಂಕ್ಷಿಪ್ತ ಸ್ಕೋರ್‌ ಬಳ್ಳಾರಿ ಟಸ್ಕರ್ 20 ಓವರ್‌ಗೆ 129/9(ಕೆ.ಬಿ.ಪವನ್‌ 64, ಅಭಿನವ್‌ ಮನೋಹರ್‌ 21, ಕೆ.ಗೌತಮ್‌ 23ಕ್ಕೆ4).

– ಸಿ.ದಿನೇಶ್‌

ಟಾಪ್ ನ್ಯೂಸ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.