ಇಂದಿನಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್: ಮಣಿಪಾಲ್ ಟೈಗರ್ ಗೆ ಹರ್ಭಜನ್ ಸಿಂಗ್ ನಾಯಕ
4 ತಂಡಗಳ ಸೆಣಸಾಟ
Team Udayavani, Sep 17, 2022, 5:55 AM IST
ಕೋಲ್ಕತಾ: ಶನಿವಾರ ಕೋಲ್ಕತಾದಲ್ಲಿ ನಡೆಯಲಿರುವ “ಲೆಜೆಂಡ್ಸ್ ಲೀಗ್’ ಕ್ರಿಕೆಟ್ ಆರಂಭಿಕ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ. ರವಿವಾರ ಲಕ್ನೋದಲ್ಲಿ ಮಣಿಪಾಲ್ ಟೈಗರ್-ಭಿಲ್ವಾರ ಕಿಂಗ್ಸ್ ಮುಖಾಮುಖಿ ಆಗಲಿವೆ.
“ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್’ (ಎಂಇಎಂಜಿ) ಮಣಿಪಾಲ್ ಟೈಗರ್ ಫ್ರಾಂಚೈಸಿಯ ಮಾಲಕತ್ವ ಹೊಂದಿದೆ. ರಂಜನ್ ಪೈ ಅವರು ಈ ಗ್ರೂಪ್ನ ಅಧ್ಯಕ್ಷರಾಗಿದ್ದಾರೆ.
ಹರ್ಭಜನ್ ಸಿಂಗ್ ತಂಡದ ನಾಯಕ. ಬ್ರೆಟ್ ಲೀ, ಮುತ್ತಯ್ಯ ಮುರಳೀಧರನ್ ಅವರಂಥ ಗತಕಾಲದ ಶ್ರೇಷ್ಠ ಬೌಲರ್ಗಳನ್ನು ಈ ತಂಡ ಹೊಂದಿದೆ. 1996ರ ವಿಶ್ವಕಪ್ ಹೀರೋ, ಶ್ರೀಲಂಕಾದ ವಿಕೆಟ್ ಕೀಪರ್ ರೊಮೇಶ್ ಕಲುವಿತರಣ ಕೂಡ ಇದ್ದಾರೆ.
ವಿಶ್ವಕಪ್ ವಿಜೇತ ಆಸ್ಟ್ರೇಲಿಯ ತಂಡದ ಕೋಚ್ ಜಾನ್ ಬುಕಾನನ್, ಶರಣ್ದೀಪ್ ಸಿಂಗ್ ತಂಡದ ಕೋಚಿಂಗ್ ವಿಭಾಗದ ಸದಸ್ಯರು.
ಮಣಿಪಾಲ್ ಟೈಗರ್ ತಂಡ
ಹರ್ಭಜನ್ ಸಿಂಗ್ (ನಾಯಕ), ಪರ್ವಿಂದರ್ ಅವಾನಾ, ವಿಆರ್ವಿ ಸಿಂಗ್, ಇಮ್ರಾನ್ ತಾಹಿರ್, ಬ್ರೆಟ್ ಲೀ, ಮುತ್ತಯ್ಯ ಮುರಳೀಧರನ್, ಫಿಲ್ ಮಸ್ಟರ್ಡ್, ಮೊಹಮ್ಮದ್ ಕೈಫ್, ರಿಯಾನ್ ಸೈಡ್ಬಾಟಮ್, ಲ್ಯಾನ್ಸ್ ಕ್ಲೂಸ್ನರ್, ಡಿಮಿಟ್ರಿ ಮಸ್ಕರೇನಸ್, ರೊಮೇಶ್ ಕಲುವಿತರಣ, ರೀತಿಂದರ್ ಸೋಧಿ, ಕೋರಿ ಆ್ಯಂಡರ್ಸನ್, ಡರೇನ್ ಸಮ್ಮಿ.