ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್: ಕ್ವಾ. ಫೈನಲ್ಗೆ ಸಿಂಧು, ಪ್ರಣಯ್
Team Udayavani, Jul 8, 2022, 6:42 AM IST
ಕೌಲಾಲಂಪುರ: ಪಿ.ವಿ. ಸಿಂಧು ಮತ್ತು ಎಚ್. ಎಸ್. ಪ್ರಣಯ್ “ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಪುರುಷರ ಸಿಂಗಲ್ಸ್ ವಿಭಾಗದಿಂದ ಬಿ. ಸಾಯಿ ಪ್ರಣೀತ್, ಪಿ. ಕಶ್ಯಪ್ ಹೊರಬಿದ್ದರು.
7ನೇ ಶ್ರೇಯಾಂಕದ ಸಿಂಧು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಚೀನದ ಜಾಂಗ್ ಯಿ ಮಾನ್ ವಿರುದ್ಧ 21-12, 21-10 ಅಂತರದ ಸುಲಭ ಜಯ ಸಾಧಿಸಿದರು. ವಿಶ್ವದ 32ನೇ ರ್ಯಾಂಕಿಂಗ್ ಆಟಗಾರ್ತಿಯನ್ನು ಕೇವಲ 28 ನಿಮಿಷಗಳಲ್ಲಿ ಕೆಡವಿದರು.
ಆದರೆ ಸಿಂಧು ಅವರ ಮುಂದಿನ ಸುತ್ತು ಸುಲಭದ್ದಲ್ಲ. ಇಲ್ಲಿ ಅವರು ಚೈನೀಸ್ ತೈಪೆಯ ತೈ ಜು ಯಿಂಗ್ ಸವಾಲನ್ನು ಎದುರಿಸಬೇಕಿದೆ. ಕಳೆದ ವಾರವಷ್ಟೇ ಮಲೇಷ್ಯಾ ಓಪನ್ ಕೂಟದಲ್ಲಿ ವಿಶ್ವದ ನಂ.2 ಯಿಂಗ್ ವಿರುದ್ಧ ಸಿಂಧು ಪರಾಭವಗೊಂಡಿದ್ದರು. ಅದು ಕೂಡ ಕ್ವಾರ್ಟರ್ ಫೈನಲ್ ಹಂತದ ಪಂದ್ಯವೇ ಆಗಿತ್ತು. ಇಲ್ಲಿ ಸಿಂಧು ಸೇಡು ತೀರಿಸಿಕೊಳ್ಳಬಲ್ಲರೇ ಎಂಬುದೊಂದು ನಿರೀಕ್ಷೆ. ಸಿಂಧು ವಿರುದ್ಧ ಯಿಂಗ್ 16-5 ಅಂತರದ ಗೆಲುವಿನ ದಾಖಲೆ ಹೊಂದಿದ್ದಾರೆ. ಎಚ್.ಎಸ್. ಪ್ರಣಯ್ ಚೈನೀಸ್ ತೈಪೆಯ ವಾಂಗ್ ಜೂ ವೀ ಅವರನ್ನು 21-19, 21-16 ಅಂತರದಿಂದ ಕೆಡವಿದರು. ಜಪಾನಿನ ಕಾಂಟ ಸುನೆಯಾಮ ಇವರ ಕ್ವಾರ್ಟರ್ ಫೈನಲ್ ಎದುರಾಳಿ.
ಬಿ. ಸಾಯಿ ಪ್ರಣೀತ್ ಅವರನ್ನು ಚೀನದ ಲೀ ಶೆ ಫೆಂಗ್ ವಿರುದ್ಧ 14-21, 17-21 ಅಂತರದಿಂದ ಪರಾಭವಗೊಳಿಸಿದರು. ಕಶ್ಯಪ್ ಅವರನ್ನು ಆ್ಯಂಟನಿ ಸಿನಿಸುಕ ಗಿಂಟಿಂಗ್ 21-10, 21-15ರಿಂದ ಸೋಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ