ಮಾ. 30: ಐಪಿಎಲ್ ಗ್ಯಾಲರಿ ಟಿಕೆಟ್ ಮಾರಾಟ
Team Udayavani, Mar 26, 2019, 6:15 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ. 30 ರಂದು ಬೆಮಗಳೂರು ಐಪಿಎಲ್ ಪಂದ್ಯಗಳ ಗ್ಯಾಲರಿ ಟಿಕೆಟ್ಗಳ ಮಾರಾಟ ನಡೆಯಲಿದೆ ಎಂದು ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಅಧಿಕೃತ ಟಿಕೆಟ್ ಏಜೆನ್ಸಿ “ಟಿಕೆಟ್ಜೆನಿ’ ತಿಳಿಸಿದೆ.
ಐಪಿಎಲ್ ಆರಂಭಕ್ಕೂ ಮೊದಲು ಗ್ಯಾಲರಿ ಟಿಕೆಟ್ ಮಾರಾಟಕ್ಕೆ ಚಾಲನೆ ನೀಡಲಾಗಿತ್ತು. ಈ ವೇಳೆ 4,500 ಗ್ಯಾಲರಿ ಟಿಕೆಟ್ಗಳು ಮಾರಾಟಗೊಂಡಿದ್ದವು. ಇದೀಗ ಎರಡನೇ ಬಾರಿಗೆ ಗ್ಯಾಲರಿ ಟಿಕೆಟ್ಗಳ ಮಾರಾಟ ನಡೆಯಲಿದೆ. ಟಿಕೆಟ್ ಆಸಕ್ತರು ಗೇಟ್ ನಂ.2ರಲ್ಲಿ ಬೆಳಗ್ಗೆ 10ರಿಂದ ಸಂಜೆ 6 ತನಕ ಟಿಕೆಟ್ ಖರೀದಿಸಲು ಅವಕಾಶ ಇದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.