ಏಕದಿನ: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಮುನ್ನಡೆ


Team Udayavani, Mar 26, 2019, 6:10 AM IST

PAK-AUS

ಶಾರ್ಜಾ: ಶತಕವೀರ ಏರಾನ್‌ ಫಿಂಚ್‌ ಮತ್ತು ಉಸ್ಮಾನ್‌ ಖವಾಜ ಅವರ ಅಮೋಘ ಆಟದ ನೆರವಿನಿಂದ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ 2-0 ಮುನ್ನಡೆ ಸಾಧಿಸಿದೆ.

“ಶಾರ್ಜಾ ಕ್ರಿಕೆಟ್‌ ಮೈದಾನ’ದಲ್ಲಿ ಭಾನುವಾರ ರಾತ್ರಿ ನಡೆದ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಮೊದಲ ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 7 ವಿಕೆಟಿಗೆ 284 ರನ್‌ ದಾಖಲಿಸಿದರೆ, ಆಸ್ಟ್ರೇಲಿಯ 47.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 285 ರನ್‌ ಬಾರಿಸಿತು. ಮೊದಲ ಪಂದ್ಯದಲ್ಲಿ 116 ರನ್‌ ಗಳಿಸಿ ಮೆರೆದಾಡಿದ ಫಿಂಚ್‌ ಮತ್ತೂಮ್ಮೆ ಸಿಡಿದು ಜೀವನಶ್ರೇಷ್ಠ ಅಜೇಯ 153 ರನ್‌ ಬಾರಿಸಿದರು. 143 ಎಸೆತಗಳ ಈ ಇನಿಂಗ್ಸ್‌ನಲ್ಲಿ 11 ಬೌಂಡರಿ, 6 ಸಿಕ್ಸರ್‌ ಸೇರಿದ್ದವು. 3ನೇ ಶತಕದ ನಿರೀಕ್ಷೆಯಲಿದ್ದ ಖವಾಜ ಕೇವಲ 12 ರನ್‌ಗಳ ಅಂತರದಲ್ಲಿ ಈ ಅವಕಾಶ ಕಳೆದುಕೊಂಡರು. ಖವಾಜ ಗಳಿಕೆ 109 ಎಸೆತಗಳಲ್ಲಿ 88 ರನ್‌. ಇವರಿಬ್ಬರ ಮೊದಲ ವಿಕೆಟ್‌ ಜತೆಯಾಟದಲ್ಲಿ 209 ರನ್‌ ಹರಿದು ಬಂತು. ಇದು ಆಸ್ಟ್ರೇಲಿಯದ ಚೇಸಿಂಗ್‌ ವೇಳೆ ಆರಂಭಿಕ ಜತೆಯಾಟದಲ್ಲಿ ಒಟ್ಟುಗೂಡಿದ ಅತ್ಯಧಿಕ ರನ್‌ ಆಗಿದೆ. ಈ ಗೆಲುವಿನ ಮೂಲಕ ಆಸ್ಟೇಲಿಯ ಸತತ 5ನೇ ಜಯ ದಾಖಲಿಸಿದೆ. ಭಾರತದ ವಿರುದ್ಧ ಏಕದಿನ ಸರಣಿಯ ಕೊನೆಯ 3 ಪಂದ್ಯಗಳನ್ನು ಗೆದ್ದು ಸರಣಿ ಜಯಿಸಿತ್ತು.

ರಿಜ್ವಾನ್‌ ಚೊಚ್ಚಲ ಶತಕ: ಮೊದಲೆರಡು ವಿಕೆಟ್‌ ಬೇಗನೇ ಕಳೆದುಕೊಂಡ ಪಾಕಿಸ್ತಾನಕ್ಕೆ ಆಸರೆಯಾಗಿ ನಿಂತವರು ಮೊಹಮ್ಮದ್‌ ರಿಜ್ವಾನ್‌. ಅವರು 126 ಎಸೆತಗಳಲ್ಲಿ 115 ರನ್‌ ಬಾರಿಸಿದರು. ಇದು ಅವರ ಏಕದಿನ ಕ್ರಿಕೆಟಿನ ಚೊಚ್ಚಲ ಶತಕ. ಈ ಆಟದಲ್ಲಿ 11 ಬೌಂಡರಿಗಳು ಸೇರಿದ್ದವು. ನಾಯಕ ಶೋಯಿಬ್‌ ಮಲಿಕ್‌ ಅರ್ಧ ಶತಕ ಬಾರಿಸಿದರು (60).

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ 50 ಓವರ್‌, 284/7 (ರಿಜ್ವಾನ್‌ 115, ಮಲಿಕ್‌ 60, ರಿಚರ್ಡ್‌ಸನ್‌ 16ಕ್ಕೆ 2). ಆಸ್ಟ್ರೇಲಿಯ 47.5 ಓವರ್‌, 285/2 (ಫಿಂಚ್‌ ಔಟಾಗದೆ 153, ಖವಾಜ 88).

ಟಾಪ್ ನ್ಯೂಸ್

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.