ಡಬಲ್ಸ್‌ : ದಿವಿಜ್‌ ಶರಣ್‌ ದ್ವಿತೀಯ ಸುತ್ತಿಗೆ

Team Udayavani, Jan 23, 2020, 12:36 AM IST

ಮೆಲ್ಬರ್ನ್: ಭಾರತದ ದಿವಿಜ್‌ ಶರಣ್‌ ಮತ್ತು ಅವರ ನ್ಯೂಜಿಲ್ಯಾಂಡಿನ ಜತೆಗಾರ ಆರ್ಟೆಮ್‌ ಸಿಟಾಕ್‌ ಅವರು ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಸುತ್ತಿಗೇರಿದ್ದಾರೆ.

ಪೋರ್ಚುಗೀಸ್‌-ಸ್ಪಾನಿಶ್‌ನ ಪಾಬ್ಲೊ ಕಾರೆನೊ ಬುಸ್ಟ ಮತು ಜೊವೊ ಸೌಸ ಅವರನ್ನು 6-4, 7-5 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ಈ ಪಂದ್ಯ ಒಂದು ತಾಸು ಮತ್ತು 28 ನಿಮಿಷಗಳವರೆಗೆ ಸಾಗಿತ್ತು.

ಈ ಮೊದಲು ಭಾರತದ ಅಗ್ರ ರ್‍ಯಾಂಕಿನ ಆಟಗಾರ ಪ್ರಜ್ಞೆàಶ್‌ ಗುಣೇಶ್ವರನ್‌ ಅವರು ಮೊದಲ ಸುತ್ತಿನಲ್ಲಿ ಸೋತು ನೋವಾಕ್‌ ಜೊಕೋವಿಕ್‌ ಅವರನ್ನು ಎದುರಿಸುವ ಅವಕಾಶ ಕಳೆದುಕೊಂಡರು.

ಇದೇ ವೇಳೆ ರೋಹನ್‌ ಬೋಪಣ್ಣ ಮತ್ತು ಜಪಾನಿನ ಯಸುಟಕ ಯುಚಿಯಾಮ ಅವರು ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ.ತಮ್ಮ ಕೊನೆಯ ಆಸ್ಟ್ರೇಲಿಯನ್‌ ಓಪನ್‌ ಆಡುತ್ತಿರುವ 13ನೇ ಶ್ರೇಯಾಂಕದ ಬಾಬ್‌ ಮತ್ತು ಮೈಕ್‌ ಬ್ರ್ಯಾನ್‌ ಅವರು 6-1, 3-6, 6-3 ಸೆಟ್‌ಗಳಿಂದ ಬೋಪಣ್ಣ-ಯುಚಿಯಾಮ ಅವರನ್ನು ಉರುಳಿಸಿದ್ದರು.

ಹಿಂದೆ ಸರಿದ ಸಾನಿಯಾ ಮಿರ್ಜಾ
ಬಲ ಕಾಲಿನ ಸ್ನಾಯು ಸೆಳೆತದಿಂದಾಗಿ ಭಾರತದ ಸಾನಿಯಾ ಮಿರ್ಜಾ ಅವರು ಮಿಕ್ಸೆಡ್‌ ಡಬಲ್ಸ್‌ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅವರು ಮಿಕ್ಸೆಡ್‌ನ‌ಲ್ಲಿ ರೋಹನ್‌ ಬೋಪಣ್ಣ ಜತೆ ಆಡಬೇಕಿತ್ತು.

ಆದರೆ 33ರ ಹರೆಯದ ಸಾನಿಯಾ ವನಿತೆಯರ ಡಬಲ್ಸ್‌ನಲ್ಲಿ ಆಡಲಿದ್ದಾರೆ. ಉಕ್ರೈನಿನ ನಾಡಿಯಾ ಕಿಚೆನೋಕ್‌ ಅವರ ಜತೆ ಆಡಲಿರುವ ಸಾನಿಯಾ ಗುರುವಾರ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ಚೀನದ ಕ್ಸಿನ್‌ಯುನ್‌ ಹಾನ್‌ ಮತ್ತು ಲಿನ್‌ ಝು ಅವರನ್ನು ಎದುರಿಸಲಿದ್ದಾರೆ.

ಮಿಕ್ಸೆಡ್‌ನ‌ಲ್ಲಿ ಸಾನಿಯಾ ಆರಂಭದಲ್ಲಿ ರಾಜೀವ್‌ ರಾಮ್‌ ಜತೆ ಆಡಬೇಕಿತ್ತು. ಆದರೆ ಜ್ವರದಿಂದ ಬಳಲುತ್ತಿರುವ ರಾಮ್‌ ಮಿಕ್ಸೆಡ್‌ನಿಂದ ಹಿಂದೆ ಸರಿದ ಕಾರಣ ಬೋಪಣ್ಣ ಜತೆ ಆಡಲು ನಿರ್ಧರಿಸಿದ್ದರು. ಇದೀಗ ಬೋಪಣ್ಣ ಮಿಕ್ಸೆಡ್‌ನ‌ಲ್ಲಿ ಕಿಚೆನಾಕ್‌ ಜತೆ ಆಡಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...

  • ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ...

  • ಬೆಂಗಳೂರು: ವಿವಿಧ ಇಲಾಖೆಯ ಸಚಿವರು ಸುಲಭವಾಗಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಬಿಜೆಪಿ ಕೇಂದ್ರ ಕಚೇರಿಗೆ ವಾರಕ್ಕೆ...

  • ಬೆಂಗಳೂರು: ಹುಳಿಮಾವು ಕೆರೆ ದುರಂತ ಸಂಭವಿಸಿ ಇಂದಿಗೆ (ಫೆ.24)ನಾಲ್ಕು ತಿಂಗಳಾಗಲಿದೆ. ಆದರೆ, ಇದಕ್ಕೆ "ಪರೋಕ್ಷವಾಗಿ ಕಾರಣರಾದ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ'...